ಮೇ 26, 2022 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ
Panchangam
ತಿಥಿ : ಏಕಾದಶೀ : May 25 10:32 am – May 26 10:54 am; ದ್ವಾದಶೀ : May 26 10:54 am – May 27 11:48 am
ನಕ್ಷತ್ರ : ರೇವತಿ: May 25 11:20 pm – May 27 12:38 am; ಅಶ್ವಿನಿ: May 27 12:38 am – May 28 02:26 am
ಯೋಗ : ಆಯುಷ್ಮಾನ್: May 25 10:44 pm – May 26 10:14 pm; ಸೌಭಾಗ್ಯ: May 26 10:15 pm – May 27 10:08 pm
ಕರಣ : ಬಾಲವ: May 25 10:39 pm – May 26 10:54 am; ಕುಲವ: May 26 10:54 am – May 26 11:17 pm; ತೈತುಲ: May 26 11:17 pm – May 27 11:48 am
Time to be Avoided
ರಾಹುಕಾಲ : 1:51 PM to 3:26 PM
ಯಮಗಂಡ : 5:56 AM to 7:31 AM
ದುರ್ಮುಹುರ್ತ : 10:09 AM to 11:00 AM, 03:13 PM to 04:04 PM
ವಿಷ : 10:08 PM to 11:52 PM
ಗುಳಿಕ : 9:06 AM to 10:41 AM
Good Time to be Used
ಅಮೃತಕಾಲ : 10:07 PM to 11:48 PM
ಅಭಿಜಿತ್ : 11:51 AM to 12:41 PM
Other Data
ಸೂರ್ಯೋದಯ : 5:56 AM
ಸುರ್ಯಾಸ್ತಮಯ : 6:36 PM
ಮೇಷ (Mesha)
ಜೀವನದ ಪ್ರತಿ ಹೆಜ್ಜೆಗಳು ಈಗ ಮಹತ್ವದ ಮೈಲುಗಲ್ಲೊಂದನ್ನು ತಲುಪುವ ಶಕ್ತಿ ನೀಡಲಿದೆ. ಯಾರು ಮಿತ್ರರು, ಯಾರು ಶತ್ರುಗಳು ಎಂದು ನಿಮಗೆ ಮನದಟ್ಟಾಗುವುದು. ಹಣಕಾಸು ವಿವಿಧ ಮೂಲಗಳಿಂದ ಬರುವುದು.
ವೃಷಭ (Vrushabh)
ನಿಮ್ಮದೇ ಆದ ವಿಶಿಷ್ಟ ಮಾತಿನ ಶಕ್ತಿಯಿಂದ ಪ್ರತಿಯೊಬ್ಬರನ್ನು ಆಕರ್ಷಿಸುವಿರಿ ಮತ್ತು ಇಂದು ಗಹನವಾದ ವಿಷಯದ ಬಗ್ಗೆ ಚರ್ಚೆ ಮಾಡುವಿರಿ. ಇದರಿಂದ ಮುಂದೆ ಅನುಕೂಲವಾಗುವುದು.
ಮಿಥುನ (Mithuna)
ನಿಮಗೆ ಅನೇಕ ಸಂಶಯ ಸಂದಿಗ್ಧತೆಗಳು ಎದುರಾದರೂ ಬರುವ ಸವಾಲನ್ನು ಗಂಭೀರವಾಗಿ ಸ್ವೀಕರಿಸಿ. ಗುರುವು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗಿ ನಿಲ್ಲುವರು. ಬಹು ಮಹತ್ತರವಾದ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು.
ಕರ್ಕ (Karka)
ಅನಿರೀಕ್ಷಿತವಾಗಿ ನಿಮ್ಮ ಹತ್ತಿರದ ಸಂಬಂಧಿಕರೇ ಮುಜುಗರವನ್ನುಂಟು ಮಾಡುವ ಸಾಧ್ಯತೆ ಇದೆ. ಆದರೆ ನಿಮ್ಮ ಬುದ್ಧಿಚಾತುರ್ಯದಿಂದ ಎಲ್ಲವನ್ನು ಎದುರಿಸುವಿರಿ. ಅಂತಿಮ ಗೆಲುವು ನಿಮ್ಮದಾಗುವುದು.
ಸಿಂಹ (Simha)
ಮಹತ್ತರವಾದ ಕಾರ್ಯ ನೆರವೇರಲು ಸಹಕಾರ ದೊರೆಯುವುದು. ಮನೆಯಲ್ಲಿನ ಒಗ್ಗಟ್ಟಿನ ಬಲವು ಸಮಾಜದ ದುಷ್ಟ ಶಕ್ತಿಗಳನ್ನು ಎದುರಿಸಲು ಸಹಕಾರಿ ಆಗುವುದು.
ಕನ್ಯಾರಾಶಿ (Kanya)
ನಿಮ್ಮ ಅನುಭವದ ಸಾರ್ಥಕತೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಹೊಸ ಅವಕಾಶ ಲಭ್ಯವಾಗಲಿದೆ. ಆರೋಗ್ಯದ ಕಡೆ ಗಮನ ಹರಿಸಿ. ಮನೆಯಲ್ಲಿ ಹರ್ಷದ ವಾತಾವರಣ ಇರುತ್ತದೆ.
ತುಲಾ (Tula)
ಮಕ್ಕಳಿಂದ ಸಂತೋಷದ ವಾರ್ತೆ ಇದೆ. ನಿಮ್ಮ ಮಾರ್ಗದರ್ಶನವೂ ಸೂಕ್ತವಾಗಿ ಸಿಗಲಿ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಲದೇವತಾ ಪ್ರಾರ್ಥನೆ ಮಾಡಿ.
ವೃಶ್ಚಿಕ (Vrushchika)
ವೃರ್ಥ ಕಾಲಹರಣ ಬೇಡ. ನಿಶ್ಚಿತವಾದ ಗುರಿ ಹಾಗೂ ಧೈರ್ಯ ನಿಮಗೆ ರಕ್ಷ ಣೆ ನೀಡುವುದು. ವಾಹನ ಖರೀದಿ ಯೋಗ ವಿರುತ್ತದೆ. ಸಂಸಾರದಲ್ಲಿ ಸ್ವಲ್ಪ ವಿರಸ ಮೂಡುವ ಸಾಧ್ಯತೆ ಇರುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ.
ಧನು ರಾಶಿ (Dhanu)
ಜನರ ನಡುವೆ ನಿಂತು ನಾಯಕತ್ವ ಪ್ರದರ್ಶಿಸುವ ಸಂದರ್ಭ ಬಂದರೆ ಅಂಥ ಸವಾಲು ಸ್ವೀಕರಿಸಿ ಒಳಿತಾಗುವುದು. ಕುಟುಂಬದ ಸದಸ್ಯರೊಡನೆ ಸೌಹಾರ್ದಯುತವಾಗಿ ವರ್ತಿಸಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.
ಮಕರ (Makara)
ಹೊರಗಿನವರು ಬಂದು ನಿಮಗೆ ಸಹಾಯ ಮಾಡುವರೆಂಬ ಭ್ರಮೆ ಬೇಡ. ನಿಮ್ಮ ಜೀವನದ ಶಿಲ್ಪಿ ನೀವೇ. ಹಾಗಾಗಿ ಕಠಿಣ ಪರಿಶ್ರಮ ಮಾಡದೆ ವಿಧಿಯಿಲ್ಲ. ಆದಾಗ್ಯೂ ಭಗವಂತ ನಿಮ್ಮ ಕೋರಿಕೆಯನ್ನು ಈಡೇರಿಸುವನು.
ಕುಂಭರಾಶಿ (Kumbha)
ಮನಸ್ಸಿನ ಸಂತಸವನ್ನು ನಿಯಂತ್ರಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನ ಎಲ್ಲವನ್ನೂ ಹಾಳು ಮಾಡುವರು. ಗುರು ರಾಘವೆಂದ್ರರನ್ನು ಮನಸಾ ಸ್ಮರಿಸಿ. ಕೆಲ ವಿಚಾರಗಳಲ್ಲಿ ಸಹೋದರನ ಸಹಕಾರ ಬಯಸುವುದು ಒಳ್ಳೆಯದು.
ಮೀನರಾಶಿ (Meena)
ಮನೆಯ ಬಂಧುಬಾಂಧವರು ಇಲ್ಲವೆ ಆತ್ಮೀಯ ಸ್ನೇಹಿತರೆ ನಿಮ್ಮನ್ನು ವಿರೋಧಿಸುವರು. ಗುರುವಿನ ಕೃಪೆಯಿಂದ ಎಲ್ಲವೂ ಒಳಿತಾಗುವುದು. ದೀನದಲಿತರಿಗೆ ಆಹಾರ ನೀಡಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
