ಹಿರಿಯ ನಟಿ ಶ್ರುತಿ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಹೊಲಕ್ಕಿಳಿದು ಉಳುಮೆ ಮಾಡುವತ್ತ ಒಲವು ತೋರಿದ್ದಾರೆ. ತಾನು ಕೃಷಿ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸದ್ಯ ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಬಗ್ಗೆ ತಾವು ಉಳುಮೆ ಮಾಡುತ್ತಿರುವ ವಿಡಿಯೋವೊಂದನ್ನ ತಮ್ಮಇನ್ಸ್ ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಹಿರಿಯ ನಟಿ ಶ್ರುತಿ, ನಾನೇ ಉತ್ತಿ, ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆ.. ಭಗವಂತನಿಗೆ ಕೋಟಿ ನಮನಗಳು ಎಂದು ಬರೆದುಕೊಂಡಿದ್ದಾರೆ. ಇನ್ನೂ ಶ್ರುತಿಯವರ ಈ ಆಸೆಗೆ ಕುಟುಂಬಸ್ಥರು ಸಾಥ್ ಕೊಟ್ಟಿದ್ದು, ಪೋಷಕರ ಸಹಾಯದಿಂದ ವ್ಯವಸಾಯಕ್ಕೆ ಹಿರಿಯ ನಟಿ ಮುಂದಾಗಿದ್ದಾರೆ.
ನಮ್ಮ ವಿಡಿಯೋ ಜೊತೆಗೆ ನಾನೇ “ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹು ವರ್ಷದ ಆಸೆ.. ಭಗವಂತನಿಗೆ ಕೋಟಿ ನಮನಗಳು.” ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
