fbpx
ಸಮಾಚಾರ

ಕನ್ನಡ ಸಿನಿಮಾ ರಂಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ ತೆಲುಗು ನಿರ್ದೇಶಕ ಗೀತಾ ಕೃಷ್ಣ ಗೆ ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ

ತೆಲುಗು ಚಿತ್ರದ ನಿರ್ದೇಶಕ ಗೀತಾ ಕೃಷ್ಣ ಯು ಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದವರು ಹೊಲಸು ಜನ ಎಂದು ಹೇಳಿದರು. ಇವರ ಮಾತಿಗೆ ಎಲ್ಲಾಕಡೆ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದವು ಮತ್ತು ಕನ್ನಡ ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಇದೀಗ ಈ ಪ್ರಕರಣ ಕುರಿತು ಕನ್ನಡ ಸಿನಿಮಾ ರಂಗದ ದಿಗ್ಗಜರು ಪ್ರತಿಕ್ರಿಯಿಸಿದ್ದು ಗೀತಾ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚಿಗೆ ಯುಟ್ಯೂಬ್ ಚಾನೆಲ್ ಒಂದರ ಸಂಧರ್ಶನದಲ್ಲಿ ಭಾಗಿಯಾಗಿದ್ದ ಗೀತಾ ಕೃಷ್ಣ ಅವರಿಗೆ ನಿರ್ದೇಶಕಿ ಸಿನಿಮಾ ರಂಗದಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಶ್ನೆ ಕೇಳುತ್ತಾ, ”ತಮಿಳು ಚಿತ್ರರಂಗದಲ್ಲಿ ಕೇವಲ ಪ್ರತಿಭೆ ಇದ್ದರಷ್ಟೆ ಅವಕಾಶ ನೀಡುತ್ತಾರಂತೆ ಹೌದಾ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗೀತಾ ಕೃಷ್ಣ “ಈ ಮಾತು ಹೇಳಿದ್ದಕ್ಕೆ ತಮಿಳು ಚಿತ್ರರಂಗದವರು ಬಂದು ನಿನಗೆ ಸನ್ಮಾನ ಮಾಡುತ್ತಾರೆ, ಅಸಲಿಗೆ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ, ಅವರಂಥಹಾ ಅಸಹ್ಯದ ಜನ ಇನ್ನೆಲ್ಲೂ ಇಲ್ಲ, ಕನ್ನಡದವರಂತೂ ಇನ್ನೂ ಅಸಹ್ಯದವರು, ಕೊಳಕು ಜನ” ಎಂದಿದ್ದಾರೆ.

ಇನ್ನು ಇವರ ಮಾತಿಗೆ ರಾಘಣ್ಣ ಪ್ರತಿಕ್ರಿಯಿಸಿ “ನಮ್ಮ ಭಾಷೆ ಈಗ ವಿಶ್ವದ ಎಲ್ಲಾ ಕಡೆ ಬೆಳಿಯುತ್ತಿದೆ. ಅಲ್ಲದೇ ಪ್ರಪಂಚದಾತ್ಯಂತ ಕನ್ನಡ ಭಾಷೆಯ ತಾಕತ್ತು ಏನು ಅನ್ನುವುದು ಎಲ್ಲರಿಗೂ ಗೊತ್ತಾಗಿದೆ. ಆದರೆ ಕನ್ನಡ ಚಿತ್ರಗಳ ಬಗ್ಗೆ ಯಾರೋ ಮಾತನಾಡಿದರೆ ಅವುಗಳ ಬಗ್ಗೆ ನಾವು ಕಿವಿ ಕೊಡೋದು ಬೇಡ. ಬದಲಿಗೆ ಅವರು ಮಾತನಾಡಲಿ ನಾವು ಬೆಳೆಯುತ್ತಾ ಹೊಗೊಣ. ಈಗ ನಾವ್ ಬೆಳಿತಾ ಇದ್ದವಿ ಅದಕ್ಕೆ ಮಾತನಾಡುತ್ತಿದ್ದಾರೆ. ನಾನು ಇವತ್ತು ಕನ್ನಡ ಭಾಷೆಯಿಂದ ದೊಡ್ಡಮಟ್ಟದಲ್ಲಿ ಬೆಳದಿದ್ದೇನೆ” ಎಂದು ಹೇಳಿದ್ದಾರೆ.

ಇನ್ನು ಬಿಗ್ ಬಾಸ್ ಖ್ಯಾತಿಯ ನಟಿ ಕೃತಿಕಾ “‘ಗೀತಕೃಷ್ಣ ಅವ್ರೆ ನೀವು ತಿನ್ನೋ ಅನ್ನ ಕೂಡ ಒಂದು ಇಂಡಸ್ಟ್ರಿಯದೆ. ಕಲೆ ಎನ್ನುವುದು ಕನ್ನಡ, ತೆಲುಗು, ತಮಿಳು ಸೇರಿ ಯಾವುದೇ ಭಾಷೆದೆ ಇರಲಿ ಅದು ಕಲೆ ಕಲೆನೆ ಆಗಿರುತ್ತದೆ. ಕಲೆಗೆ, ಕಲಾವಿದರಿಗೆ, ಕಲಾವಿದರಿಗಾಗಿ ದುಡಿಯುವವರಿಗೆ ಬೆಲೆ ಕೊಡಬೇಕು. ಕನ್ನಡ ಇಂಡಸ್ಟ್ರಿ ಕೀಳು, ಕಚಡಾ ಅಂತ ಯಾರು ಮಾತನಾಡಬಾರದು. ಅದು ನೀವಾಗಿರಲಿ ಅಥವಾ ನಿಮಗಿಂತ ದೊಡ್ಡವರಾಗಲಿ ನಮ್ಮ ಚಿತ್ರರಂಗದ ಬಗ್ಗೆ ಮಾತನಾಡಬಾರದು.

ಕನ್ನಡದ ಹೆಮ್ಮೆ ಡಾ.ರಾಜ್‌ಕುಮಾರ್ ಅವರು ಯಾವತ್ತು ಯಾರ ಕುರಿತೂ ಸಹ ಮಾತನಾಡಿಲ್ಲ .ಅಣ್ಣಾವ್ರ ಬಗ್ಗೆ ಸಂಪೂರ್ಣ ಭಾರತಕ್ಕೆ ಗೊತ್ತು. ಈಗಿರುವಾಗ ಚಿಕ್ಕ ಪುಟ್ಟವರಾದ ನಾವು ಅದರ ಬಗ್ಗೆ ಮಾತನಾಡಬಾರದು ನಮಗೆ ಯೋಗ್ಯತೆ ಇಲ್ಲ. ಹೀಗಾಗಿ ಮೊದಲು ಯೋಗ್ಯತೆ ಬೆಳಸಿಕೊಂಡು ಇನ್ನೋಬ್ಬರ ಬಗ್ಗೆ ಮಾತನಾಡಬೇಕು. ಜೊತೆಗೆ ಪ್ರತಿಯೊಂದು ಇಂಡಸ್ಟ್ರಿಗೂ ಅದರದೆ ಆದ ಬೆಲೆ ಇದೆ ಮೊದಲು ಬೆಲೆ ಕೊಡೊದನ್ನು ಕಲಿಯಿರಿ. ಅವರಿವರ ಬಗ್ಗೆ ಮಾತನಾಡಿ ಚಿಕ್ಕವರಾಗಬೇಡಿ‘ ಎಂದು ಹೇಳಿದ್ದಾರೆ.

ಯಾವಾಗ ಇದು ವಿಕೋಪಕ್ಕೆ ಹೋಗುತ್ತಿದೆ ಎಂದು ಗೀತಾ ಕೃಷ್ಣ ಗೆ ಗೊತ್ತಾಯ್ತೋ ‘ನಾನು ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿಲ್ಲ. ಎಲ್ಲಾ ಭಾಷೆಗಳಲ್ಲೂ ಕಾಸ್ಟಿಕೌಚ್ ಇರುತ್ತೆ ಅಂತ ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನ ತಿರುಚಲಾಗಿದೆ. 2010ರಲ್ಲಿ ಕಾಫಿಶಾಪ್ ಅಂತ ಸಿನಿಮಾ ಮಾಡಿದ್ದೆ ಅದಕ್ಕೆ ಸಮಸ್ಯೆ ಆಗಿತ್ತು. ಕೋರ್ಟ್ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಸಿನಿಮಾ ರಿಲೀಸ್ ಮಾಡಿದೆ. ನಾನು ಕನ್ನಡ ಚಿತ್ರರಂಗದ ಬಗ್ಗೆ ಯಾವುದೇ ಮಾತನಾಡಿಲ್ಲ. ಎಲ್ಲಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇದೆ ಅಂತ ಹೇಳಿದ್ದೇನೆ ಅಷ್ಟೇ‘ ಎಂದು ತಮ್ಮ ಹೇಳಿಕೆಯನ್ನು ತಿರುಚಾಕಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top