ಬುಧವಾರ (ಮೇ 25) ರಂದು ಆರ್ ಸಿ ಬಿ ಮತ್ತು ಲಕ್ನೋ ತಂಡಗಳ ನಡುವೆ ಮೊದಲ ಎಲಿಮಿನೇಟರ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆರ್ ಸಿ ಬಿ ಬಳಗ ಉತ್ತಮ ಪ್ರದರ್ಶನ ನೀಡಿ ಕ್ವಾಲಿಫೈರ್ ಹಂತ ತಲುಪಿದೆ. ಈ ಪಂದ್ಯದ ವೇಳೆ ಒಂದು ಅನಿರೀಕ್ಷಿತ ಘಟನೆಯೊಂದು ನಡೆದಿದ್ದು ಇದಕ್ಕೆ ವಿರಾಟ್ ಕೊಹ್ಲಿ ತಮ್ಮದೇ ರೀತಿಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಆರ್ ಸಿ ಬಿ ಮತ್ತು ಲಕ್ನೋ ಪಂದ್ಯ ನಡೆಯುತ್ತಿರುವ ವೇಳೆ ಇದಕ್ಕಿದಂತೆ ಒಬ್ಬ ವ್ಯಕ್ತಿ ಮೈದಾನವನ್ನು ಪ್ರವೇಶಿಸಿದರು. ಈತ ವಿರಾಟ್ ಕೊಹ್ಲಿ ಅಭಿಮಾನಿ ಆಗಿದ್ದು ಬೌಂಡರಿ ಲೈನ್ ನಲ್ಲಿದ್ದ ವಿರಾಟ್ ಅವರನ್ನು ನೋಡಲು ಮೈದಾನದ ಒಳಗೆ ಪ್ರವೇಶಿಸಿದರು. ಆದರೆ ಇವರು ಮೈದಾನ ಪ್ರವೇಶಿಸಿ ವಿರಾಟ್ ಹತ್ತಿರ ಬರುತ್ತಿದಂತೆ ಅಲ್ಲೇ ಇದ್ದ ಕೋಲ್ಕತ್ತಾ ಪೊಲೀಸರು ಆತನನ್ನು ತಡೆದು ಬಾಹುಬಲಿ ರೇಂಜ್ ಅಲ್ಲಿ ಅವನನ್ನು ಎತ್ತುಕೊಂಡು ಓಡಿದರು.
Intruder in yesterday’s match.
Kohli 🤣 pic.twitter.com/1CiQXZTDdm— Samy (@ZlxComfort) May 26, 2022
ಆ ಅಭಿಮಾನಿಗೆ ಕೊಹ್ಲಿಯನ್ನು ಭೇಟಿಮಾಡಲು ಸಾಧ್ಯವಾಗಲೇ ಇಲ್ಲ. ಇನ್ನು ಈ ವಿಡಿಯೋ ಎಲ್ಲಾ ಕಡೆ ಸಕತ್ ವೈರಲ್ ಆಗಿದೆ. ಇದಲ್ಲದೆ ಪೊಲೀಸರು ಆ ಅಭಿಮಾನಿಯನ್ನು ಎತ್ತುಕೊಂಡು ಹೋದ ರೀತಿಯನ್ನು ಗಮನಿಸಿದ ವಿರಾಟ್ ಅವರಂತೆ ಆಕ್ಟ್ ಮಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ವಿರಾಟ್ ಪೋಲೀಸರ ಸಾಹಸವನ್ನು ನೋಡಿ ಒಂದು ಕ್ಷಣ ಆಶ್ಚರ್ಯಚಕಿತರಾದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
