ಐಪಿಎಲ್ 2022 ಇದೀಗ ರೋಚಕ ಘಟ್ಟ ತಲುಪಿದ್ದು ಕೇವಲ ಒಂದೇ ಒಂದು ಪಂದ್ಯ ಬಾಕಿ ಇದೆ. ನಾಳೆ ಅಹಮದಾಬಾದ್ ನಲ್ಲಿ ನಡೆಯುವ ಫೈನಲ್ ಹಣಾಹಣಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಾಡುತ್ತಿವೆ.
ಇದು ಗುಜರಾತ್ ತಂಡಕ್ಕೆ ಮೊದಲ ಫೈನಲ್ ಪಂದ್ಯವಾದರೆ, ರಾಜಸ್ಥಾನ್ ತಂಡಕ್ಕೆ 2008 ರಲ್ಲಿ ಕಪ್ ಗೆದ್ದ ಬಳಿಕ ಮೊದಲ ಬಾರಿ ಫೈನಲ್ ಏರುವ ಅವಕಾಶ ಸಿಕ್ಕಿದೆ. ಹೀಗಾಗಿ ಕಪ್ ಗೆಲ್ಲಲು ಉಭಯ ತಂಡಗಳು ರೋಚಕತೆಯಿಂದ ಹೋರಾಡೋದು ಪಕ್ಕ. ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ 4 ಬಾರಿ ಟ್ರೋಪಿ ಎತ್ತಿದ್ದಾರೆ. ಆದರೆ ಅದು ಸಹ ಆಟಗಾರನಾಗಿ ಮಾತ್ರ. ಇದೀಗ ತಂಡದ ನಾಯಕನಾಗಿ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇನ್ನು ರಾಜಸ್ಥಾನ್ ತಂಡದ ನಾಯಕ 14 ವರ್ಷಗಳ ಬಳಿಕ ತಮ್ಮ ತಂಡಕ್ಕೆ ಕಪ್ ಗೆಲ್ಲಿಸಿಕೊಡುವ ವಿಶ್ವಾಸದಲ್ಲಿದ್ದಾರೆ. ಇದೆಲ್ಲದರ ನಡುವೆ ಗೆದ್ದ ತಂಡಕ್ಕೆ, ರನ್ನರ್ ಅಪ್ ಆದ ತಂಡಕ್ಕೆ ಮತ್ತು ಕ್ರಮವಾಗಿ 3 ಮತ್ತು 4 ನೇ ಸ್ಥಾನ ಅಲಂಕರಿಸಿದ ತಂಡಕ್ಕೆ ಎಷ್ಟು ಬಹುಮಾನ ಮೊತ್ತ ದೊರೆಯುತ್ತದೆ ಎಂಬ ಗೊಂದಲ ಜನರಲ್ಲಿತ್ತು. ಇದಕ್ಕೆ ಉತ್ತರ ಇಲ್ಲಿದೆ.
IPL 2022 ರ ಪ್ರಶಸ್ತಿ ಪಟ್ಟಿ ಹೀಗಿದೆ:
1 . ವಿಜೇತ ತಂಡ – 20 ಕೋಟಿ ರೂ
2 . ಫೈನಲ್ನಲ್ಲಿ ಸೋತ ತಂಡ – 13 ಕೋಟಿ
3 . ನಂ. 3 ತಂಡ (RCB) – 7 ಕೋಟಿ
4 . ನಂ. 4 ತಂಡ (LSG) – 6.5 ಕೋಟಿ
5 . ಉದಯೋನ್ಮುಖ ಆಟಗಾರ – 20 ಲಕ್ಷ
6 . ಆರೆಂಜ್ ಕ್ಯಾಪ್- 15 ಲಕ್ಷ
7 . ಪರ್ಪಲ್ ಕ್ಯಾಪ್- 15 ಲಕ್ಷ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
