ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಹಿಂದಿ ಭಾಷೆ ಕುರಿತು ಚರ್ಚೆ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಹಿಂದಿನೇ ರಾಷ್ಟ್ರ ಭಾಷೆ ಎಂದು ಹೇಳಿದ್ದ ಅಜಯ್‌ಗೆ ಸುದೀಪ್ ಪ್ರೀತಿಯಿಂದ ಬುದ್ಧಿ ಹೇಳಿದ್ದರು. ಆನಂತರ ಅಜಯ್ ಕೂಡ ಕ್ಷಮೆ ಕೇಳಿದ್ದರು. ಸಿನಿಮಾ ಸೆಲೆಬ್ರಿಟಿಗಳು ಮಾತ್ರವಲ್ಲ ರಾಜಕಾರಣಿಗಳು ಮತ್ತು ಜನ ಸಾಮಾನ್ಯರು ಈ ವಿಷಯದ ಬಗ್ಗೆ ಚರ್ಚೆ ಮಾಡಿದ್ದರು. ಇದೀಗ ಈ ವಿಚಾರದ ಬಗ್ಗೆ ಬಹುಭಾಷಾ ಕಲಾವಿದ ಕಮಲ್ ಹಾಸನ್ ಮಾತನಾಡಿದ್ದಾರೆ.
ಅವರ ವಿಕ್ರಂ ಸಿನಿಮಾದ ಪ್ರಚಾರ ವೇಳೆ ಈ ವಿಚಾರದ ಬಗ್ಗೆ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು ” ದಕ್ಷಿಣ ಭಾರತ ಮತ್ತು ಹಿಂದಿ ಚಲನಚಿತ್ರಗಳ ವಿವಾದವು ಏತಕ್ಕೆ ನಡೆಯುತ್ತಿವೆ ಎಂತಲೇ ನನಗೆ ತಿಳಿಯುತ್ತಿಲ್ಲ.. ಈ ವಿವಾದ ಕೇವಲ ಪ್ರಚಲಿತವಾಗಿದೆ, ತಾತ್ಕಾಲಿಕವಾಗಿದೆ ಮತ್ತು ಅದು ಹಾದುಹೋಗುತ್ತದೆ. ಕಲಾವಿದರಿಗೆ ಗಡಿ ಇಲ್ಲ, ” ಎಂದು ಹೇಳಿದ್ದಾರೆ.
“ಇದು ಸಾಮಯಿಕ, ತಾತ್ಕಾಲಿಕ, ಮತ್ತು ಅದು ಹಾದುಹೋಗುತ್ತದೆ. ಇದು ಕಾಲೇಜುಗಳಲ್ಲಿ ರಾಗಿಂಗ್‌ನಂತೆ. ನಂತರ ಅವರು ಬಹಳ ಸ್ನೇಹಿತರಾಗುತ್ತಾರೆ ಮತ್ತು ಒಬ್ಬರನ್ನೊಬ್ಬರು ಕಳೆದುಕೊಳ್ಳುತ್ತಾರೆ, ನಂತರ ಅವರು ಬಂದು ಕಣ್ಣೀರು ಹಾಕುತ್ತಾ ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ. ಏಕೆಂದರೆ ಅವರು ತಮ್ಮ ಸಮಯವನ್ನು ಕಳೆದುಕೊಳ್ಳುತ್ತಾರೆ, ಅದು ಭಾರತವು ಎಂತಹ ವೈವಿಧ್ಯಮಯ ದೇಶ ಎಂಬುದರ ಬಗ್ಗೆ ತಿಳುವಳಿಕೆಯ ಕೊರತೆ” ಎಂದು ಖಾಸಗಿ ಮಾದ್ಯಮದಲ್ಲಿ ಕಮಲ್ ಹಾಸನ್ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
