ನಟ ಕಿಚ್ಚ ಸುದೀಪ್ ಅವರಿಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಬಗ್ಗೆ ಎಷ್ಟು ಅಭಿಮಾನವಿದೆ ಎಂಬುದು ಇತ್ತೀಚಿಗೆ ನಡೆದ ಟ್ವೀಟ್ ವಾರ್ ಅಲ್ಲಿ ನಾವು ಗಮನಿಸಬಹುದು. ಇದಲ್ಲದೆ ನಟಿ ಜಾಕ್ವೆಲಿನ್ ಗೆ ಕನ್ನಡ ಕಲಿಸುವ ಮೂಲಕ ಮತ್ತೆ ತಮಗೆ ಕನ್ನಡ ಭಾಷೆಯ ಬಗ್ಗೆ ಎಷ್ಟು ಅಭಿಮಾನವಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ನಟ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಹಲವು ಕ್ರೇಜ್ ಹುಟ್ಟಿಸಿದೆ. ಇದರ ಮದ್ಯೆ ರಾ ರಾ ರಕ್ಕಮ್ಮ ಸಾಂಗ್ ಸಕತ್ ಕಿಕ್ ಕೊಡುತ್ತಿದೆ. ಇನ್ನು ಇದೇ ಹಾಡಿನ ವಿಚಾರವಾಗಿ ನಟ ಕಿಚ್ಚ ಸುದೀಪ್ ಮತ್ತು ಜಾಕ್ವಲಿನ್ ವಿಡಿಯೋ ಕಾಲ್ನಲ್ಲಿ ಮಾತಾಡಿದ್ದಾರೆ.
ಇವರಿಬ್ಬರ ವಿಡಿಯೋ ಸಂವಾದದಲ್ಲಿ ನಟಿ ಜಾಕ್ವೆಲಿನ್ ಸುದೀಪ್ ಅವರಿಗೆ ಒಂದು ಟಾಸ್ಕ್ ಕೊಟ್ಟಿದ್ದಾರೆ. ಅದೇನೆಂದರೆ ಗಡಂಗ್ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿ ನಮ್ಮ ತಂಡ ನಿಮ್ಮ ಡಾನ್ಸ್ ನೋಡಬೇಕಂತೆ ಎಂದು ಒತ್ತಾಯ ಮಾಡುತ್ತಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸುದೀಪ್ ಜಾಕ್ವೆಲಿನ್ ಅವರಿಗೆ ಕನ್ನಡ ಮಾತನಾಡಬೇಕು ಎಂಬ ಟಾಸ್ಕ್ ನೀಡಿದ್ದಾರೆ.
Well…. @Asli_Jacqueline … ua request in this conversation is attended to 😅😅 ,,,I have recorded my reel,,, posting it soon..
You better like it 🥶#RaRaRakkamma #VikrantRona pic.twitter.com/Prt5i7ov9v
— Kichcha Sudeepa (@KicchaSudeep) May 26, 2022
ಈ ವಿಡಿಯೋ ಕಾಲ್ ನಲ್ಲಿ ಜಾಕ್ವೆಲಿನ್ ಅವರಿಗೆ “ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದಿನಿ.” ಎಂದು ಕನ್ನಡದಲ್ಲಿ ಹೇಳುವಂತೆ ಸುದೀಪ್ ಹೇಳಿದರು. ಅದರಂತೆ ಜಾಕ್ವೆಲಿನ್ ತೊದಲು ನುಡಿಯಲ್ಲಿ ಸುದೀಪ್ ಹೇಳಿದ ಮಾತನ್ನು ರಿಪೀಟ್ ಮಾಡಿದ್ದಾರೆ. ಇದಾದ ನಂತರ ಸುದೀಪ್ ಜಾಕ್ವೆಲಿನ್ ನೀಡಿದ ಚಾಲೆಂಜ್ ಅನ್ನು ಸ್ವೀಕರಿಸಿ ರಾ ರಾ ರಕ್ಕಮ್ಮ ಸಾಂಗಿಗೆ ಹೆಜ್ಜೆ ಹಾಕಿದ್ದು ಇದು ತಮ್ಮ ಮೊತ್ತ ಮೊದಲ ರೇಲ್ಸ್ ಎಂದು ಹೇಳಿದರೆ. ಇವರಿಬ್ಬರ ವಿಡಿಯೋ ಸಂವಾದ ಈಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
