fbpx
ಸಮಾಚಾರ

‘ರಕ್ಕಮ್ಮಾ….’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ: ವಿಡಿಯೋ ವೈರಲ್

ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ರಾ.ರಾ. ರಕ್ಕಮ್ಮ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ., ಕೇವಲ ಸುದೀಪ್ ಅಭಿಮಾನಿಗಳು ಮಾತ್ರವಲ್ಲದೆ ಸಕಲ ಸಿನಿಪ್ರಿಯರು ಹಾಡಿಗೆ ಮನಸೋತಿದ್ದಾರೆ. ಹಲವಾರು ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್​ ಮಾಡುವುದು ಒಂದು ಟ್ರೆಂಡ್​ ಆಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳು ಕೂಡ ರೀಲ್ಸ್​ ಮಾಡುತ್ತಾರೆ.

 

 

View this post on Instagram

 

A post shared by Aravind K P (@aravind_kp)

 

ಇದೀಗ ಈ ಹಾಡಿಗೆ ಇದೀಗ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಸಹ ರೀಲ್ಸ್ ವಿಡಿಯೋ​ ಮಾಡಿದ್ದು, ಅಭಿಮಾನಿಗಳು ಕಾಮೆಂಟ್​ ಮಳೆಯನ್ನು ಸುರಿಸಿದ್ದಾರೆ. ದಿವ್ಯಾ ಮತ್ತು ಅರವಿಂದ್ ಜೊತೆಗೆ ಮಾಡಿರುವ ಈ ವಿಡಿಯೋಗೆ ಇಲ್ಲಿಯವರೆಗೂ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ.. ಸದ್ಯ ಇವರಿಬ್ಬರ ರೀಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

 

‘ಬಿಗ್ ಬಾಸ್ ಸೀಸನ್​ 8’ರಲ್ಲಿ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಒಂದು ಟಾಸ್ಕ್​​ನಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು. ಆ ಬಳಿಕ ಇವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಈ ಗೆಳೆತನ ಬಿಗ್​ ಬಾಸ್​ ಮನೆಯಲ್ಲೇ ಪ್ರೀತಿಗೆ ತಿರುಗಿತು. ಇಬ್ಬರೂ ಇದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಮನೆಯಿಂದ ಹೊರ ಬಂದ ನಂತರವೂ ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಈ ಬಗ್ಗೆ ಫ್ಯಾನ್ಸ್​ಗೆ ಖುಷಿ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top