ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಹಾಡು ಹಾಡುತ್ತಲೇ ಹಿರಿಯ ಗಾಯಕರೊಬ್ಬರು ನಿಧನರಾಗಿದ್ದಾರೆ. ಹೀಗೆ ಹಾಡು ಹೇಳುವ ವೇಳೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದು ಮಲಯಾಳಂ ಗಾಯಕ ಎಡವ ಬಶೀರ್. ಇವರಿಗೆ 87 ವರ್ಷ ವಯಸ್ಸಾಗಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
Warning: Disturbing Content
Singer dies during live performance.
Malayalam singer #EdavaBasheer died after collapsing on the stage while singing.
The 78-year-old was performing at the Golden jubilee of Blue Diamonds orchestra. pic.twitter.com/k6CCfhafjO— Bobins Abraham Vayalil (@BobinsAbraham) May 29, 2022
ಕೇರಳದಲ್ಲಿ ನಡೆಯುವ ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುವ ಮೂಲಕ ಎಡವ ಬಶೀರ್ ಹೆಚ್ಚು ಜನಪ್ರಿಯರಾಗಿದ್ದಾರೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ 1978ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಟೂಟ್ ಟಾಯ್ಸ್ನ ಪ್ರಸಿದ್ಧ ಭಾರತೀಯ ಗಾಯಕ ಕೆಜೆ ಯೇಸುದಾಸ್ ಅವರ ಮಾನ ಹೋ ತುಮ್ ಬೇಹದ್ ಹಸೀನ್… ಹಾಡನ್ನು ಹಾಡುವಾಗ ಎಡವ ಬಶೀರ್ ಕುಸಿದುಬಿದ್ದಿದ್ದಾರೆ
ವೇದಿಕೆಯಲ್ಲಿ ಕುಸಿದು ಬಿದ್ದ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಯಿತು. ಈ ವೇಳೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹೀಗಾಗಿ ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರು ವೇದಿಕೆಯ ಮೇಲೆ ಹಾಡು ಹೇಳುತ್ತಿರುವಾಗಲೇ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
