ಕೆಜಿಎಫ್ ಚಾಪ್ಟರ್-2 ಬಿಡುಗಡೆ ಆಗಿ ಸಕತ್ ಸೌಂಡ್ ಮಾಡಿರೋದು ನಮಗೆಲ್ಲಾ ಗೊತ್ತು. ಇನ್ನು ಕೆಜಿಎಫ್ ಹವಾ ಎಷ್ಟರಮಟ್ಟಿಗೆ ಇತ್ತು ಅನ್ನೋದು ನಮಗೆಲ್ಲಾ ಗೊತ್ತು. ಇದಲ್ಲದೆ ಕಿಜಿಎಫ್ ಹವಾ ಐಪಿಎಲ್ 2022 ಗ್ರಾಂಡ್ ಫಿನಾಲೆ ವರೆಗೂ ಹರಡಿದೆ ಎಂದರೆ ಇದರ ಹವಾ ಎಷ್ಟಿದೆ ಎಂಬುದು ನಾವೇ ಅರ್ಥಮಾಡಿಕೊಳ್ಳಬೇಕು.
ಐಪಿಎಲ್ ನ ಗ್ರಾಂಡ್ ಫಿನಾಲೆ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನೆನ್ನೆ ನಡೆಯಿತು. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಣವೀರ್ ಸಿಂಗ್ ಕಿಜಿಎಫ್ ನ ‘ವೈಲೆನ್ಸ್ ವೈಲೆನ್ಸ್’ ಡೈಲಾಗ್ಗೆ ಅಭಿನಯಿಸಿ ಧೀರ ಧೀರ ಹಾಡಿಗೆ ಹೆಜ್ಜೆ ಹಾಕಿದರು. ಇವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಹೆಮ್ಮೆಯ ಕ್ಷಣ PROUD MOMENT 🙏#IPL2022 #KGFChapter2#ನಮ್ಮHombale #ನಮ್ಮRCB@RCBTweets @hombalefilms
@TheNameIsYash @prashanth_neel @VKiragandur @duttsanjay @TandonRaveena @SrinidhiShetty7 @HombaleGroup @bhuvangowda84 @RaviBasrur @ChaluveG— #KGFChapter2 – Box Office Monster 🔥 (@KGFTheFilm) May 29, 2022
ಫೈನಲ್ ಪಂದ್ಯದಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಿದವು. ಹೈ ವೋಲ್ಟೇಜ್ ಇಂದ ಕೂಡಿದ ಪಂದ್ಯದಲ್ಲಿ ಗುಜರಾತ್ ತಂಡ ಉತ್ತಮ ಪ್ರದರ್ಶನ ನೀಡಿ ಐಪಿಎಲ್ ಪಾದಾರ್ಪಣೆ ಮಡಿದ ಮೊದಲ ಸೀಸನ್ ಅಲ್ಲೇ ಕಪ್ ಗೆದ್ದು ಸಂಭ್ರಮಿಸಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
