ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ. ಪ್ರಾದೇಶಿಕ ಭಾಷೆಗಳ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿಯನ್ನು ಹೇರುವ ಕಾರ್ಯ ಕೇಂದ್ರ ಸರ್ಕಾರದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಇತ್ತೀಚಿಗೆ ಕೇಂದ್ರದ ‘ತ್ರಿಭಾಷಾ ನೀತಿ’, ‘ಮೆಟ್ರೋದಲ್ಲಿ ಹಿಂದಿ’ ‘ಹಿಂದಿ ದಿವಸ್ ಆಚರಣೆ’ ವಿಚಾರಗಳು ಭಾರಿಗೆ ಟೀಕೆಗೆ ಗುರಿಯಾಗಿದ್ದವು. ಇದೀಗ ಹಿಂದಿ ಹೇರಿಕೆ ವಿರುದ್ಧ ಜೈನ ಅರ್ಚಕರು ಸಿಡಿದೆದ್ದಿದ್ದಾರೆ.
ಇತ್ತೀಚೆಗೆ ಪಂಚಕಲ್ಯಾಣದಲ್ಲಿ ಕನ್ನಡ ಪೂಜೆ ಇದ್ದರೂ ಸಹ ಹಿಂದಿ ಪೂಜೆ ಮಾಡಲಾಗುತ್ತಿದೆ. ಪ್ರತಿಷ್ಟಾತಿಲಕ ರಚನೆ ಆಗಿ ಅದು ಬೇರೆ ಬೇರೆ ಭಾಷೆಗಳಲ್ಲಿ ಮುದ್ರಣ ಆಗಿದೆ ಆದರೆ ಅದನ್ನು ಬಿಟ್ಟು ಹಿಂದಿ ಪೂಜೆ ಮಾಡಲಾಗುತ್ತದೆ ಎಂಬುದು ಜೈನ ಅರ್ಚಕರ ಅಸಮಾಧಾನ.. ಈ ಬಗ್ಗೆ ಸಕಲ ಜೈನ ಅರ್ಚಕರಲ್ಲಿ ದಿಗಂಬರ ಜೈನ ಅಚ೯ಕ ಸಂಘ(ರಿ) ಮೈಸೂರು ಪ್ರತಿಷ್ಟಾಚಾಯ೯ SM ಸನ್ಮತಿಕುಮಾರ್ ಅವರು ಮನವಿಯೊಂದನ್ನ ಮಾಡಿಕೊಂಡಿದ್ದಾರೆ.
“ಹಿಂದಿಯಲ್ಲಿ ಪೂಜೆ ಮಾಡುವುದರಿಂದ ನಮ್ಮ ಭಾಷೆಗೆ ಅವಮಾನ ಮಾಡಿದಂತಾಗುತ್ತದೆ. ಇತ್ತೀಚೆಗೆ ಶಾಂತಿ ವಿಧಾನ ಹಾಗೂ ಇನ್ನೂ ಇತರೆ ಪೂಜೆ ಹಿಂದಿ ಪೂಜೆ ಕನ್ನಡ ಭಾಷೆಯಲ್ಲಿ ಮುದ್ರಿಸಿ ಪೂಜೆ ಮಾಡುತ್ತಾರೆ. ಇದು ಪೂರ್ವಾಚಾಯ೯ರಿಗೆ ಅವಮಾನ ಆದಂತೆ ಆಗುತ್ತದೆ ಮೊದಲು ನಿಮ್ಮ ಹಿಂದಿ ಪೂಜೆ ಮತ್ತು ಫಿಲಂ ಹಾಡುಗಳನ್ನು ಬಿಟ್ಟು ಪ್ರಾಕೃತ ಮತ್ತು ಕನ್ನಡ ಭಾಷೆಯಲ್ಲಿ ಪೂಜೆ ಸಲ್ಲಿಸಿ ಗೌರವ ತೋರಿ” ಎಂದು ಸಕಲ ಜೈನ ಅರ್ಚಕರಿಗೆ ಸನ್ಮತಿಕುಮಾರ್ ಅವರು ಸೂಚನೆ ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
