ಇತ್ತೀಚಿನ ದಿನಗಳಲ್ಲಿ, ಸಲಿಂಗ ವಿವಾಹವು ಸಾಮಾನ್ಯ.ಇಲ್ಲಿಯವರೆಗೂ ಎಷ್ಟೊಂದು ಸಲಿಂಗ ವಿವಾಹವು ನಡೆದಿದೆ. ಇದೀಗ ಇದಕ್ಕೆ ಮತ್ತೊಂದು ಉದಾಹರಣೆಯಂತೆ ಇಂಗ್ಲೆಂಡ್ ಮಹಿಳಾ ಕ್ರಿಕೆಟಿಗರಾದ ನ್ಯಾಟ್ ಸಿವರ್ ಮತ್ತು ಕ್ಯಾಥರೀನ್ ಬ್ರಂಟ್ ಅವರ ವಿವಾಹ.
ಇಂಗ್ಲೆಂಡ್ ಮಹಿಳಾ ಕ್ರಿಕೆಟಿಗರಾದ ನ್ಯಾಟ್ ಸಿವರ್ ಮತ್ತು ಕ್ಯಾಥರೀನ್ ಬ್ರಂಟ್ ಅವರು ಸುಮಾರು ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮೇ 29 ರ ಭಾನುವಾರದಂದು ವಿವಾಹ ರಾಗಿದ್ದಾರೆ. ಇಬ್ಬರೂ ಸ್ಟಾರ್ ಕ್ರಿಕೆಟಿಗರು ಐಕಾನಿಕ್ ಲಾರ್ಡ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ 2017 ರ ಇಂಗ್ಲೆಂಡ್ ಮಹಿಳಾ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. 2017-18 ರಲ್ಲಿ, ಈ ದಂಪತಿಗಳು ತಾವು ಸಂಬಂಧದಲ್ಲಿದ್ದೇವೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಸೈವರ್ ಮತ್ತು ಬ್ರಂಟ್ 2020 ರಲ್ಲಿ ಮದುವೆಯಾಗಲು ಯೋಜಿಸಿದ್ದರು ಆದರೆ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಅವರ ವಿವಾಹ ವಿಳಂಬವಾಗಿತ್ತು. ಹೀಗಾಗಿ ಎರಡು ವರ್ಷಗಳ ನಂತರ ಈ ದಂಪತಿಗಳು ವಿವಾಹರಾಗಿದ್ದಾರೆ.
Our warmest congratulations to Katherine Brunt & Nat Sciver who got married over the weekend ❤️ pic.twitter.com/8xgu7WxtFW
— England Cricket (@englandcricket) May 30, 2022
ಅಕ್ಟೋಬರ್ 2019 ರಲ್ಲಿ, ನ್ಯಾಟ್ ಮತ್ತು ಕ್ಯಾಥರೀನ್ ನಿಶ್ಚಿತಾರ್ಥ ಮಾಡಿಕೊಂಡರು. ವರದಿಗಳ ಪ್ರಕಾರ, ಅವರು ಸೆಪ್ಟೆಂಬರ್ 2020 ರಲ್ಲಿ ಮದುವೆಯಾಗಲು ಇಚ್ಛಿಸಿದರು ಆದರೆ ಭಯಾನಕ ಕೋವಿಡ್ -19 ಕಾರಣದಿಂದ ಅವರ ಮದುವೆಯನ್ನು ರದ್ದುಗೊಳಿಸಲಾಯಿತು. ಈಗ ಅನೇಕ ವರ್ಷಗಳು ಒಟ್ಟಿಗೆ ಇದ್ದ ಕಾರಣ ಇದೀಗ ವಿವಾಹ ರಾಗಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
