fbpx
ಸಮಾಚಾರ

ಪಂಜಾಬಿ ಗಾಯಕ ಮೂಸೆವಾಲಾ ಕೊಲೆ ಪ್ರಕರಣ: ನಟ ಸಲ್ಮಾನ್‌ ಖಾನ್ ಗೆ ಭದ್ರತೆ ಹೆಚ್ಚಳ

ಗಾಯಕ-ರಾಜಕಾರಣಿ ಸಿಧು ಮೂಸ್ ವಾಲಾ ಹತ್ಯೆಯಾದ ಕೆಲವೇ ದಿನಗಳಲ್ಲಿ ಮುಂಬೈ ಪೊಲೀಸರು ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಅವರನ್ನು ಪ್ರಮುಖ ಶಂಕಿತ ಎಂದು ಹೆಸರಿಸಿದ ನಂತರ ನಟನಿಗೆ ಬೆದರಿಕೆಯ ಮಟ್ಟವನ್ನು ಹೆಚ್ಚಿಸಲಾಗಿದೆ..

ಬಿಷ್ಣೋಯ್ ಅವರು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಖಾನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ. ಸಲ್ಮಾನ್, ಕೃಷ್ಣ ಮೃಗ ಬೇಟೆ ಪ್ರಕರಣದ ಆರೋಪಿಯಾಗಿರುವುದರಿಂದ ಅವರಿಗೆ ಹಲವು ಬಾರಿ ಬೆದರಿಗೆ ಹಾಕಲಾಗಿತ್ತು. 2008 ರಲ್ಲಿ, ನ್ಯಾಯಾಲಯದ ಹೊರಗೆ ಲಾರೆನ್ಸ್ ಬಿಷ್ಣೋಯ್ ಅವರು ಜೋಧ್‌ಪುರದಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುತ್ತೇವೆ ಎಂದು ಹೇಳಿದ್ದರು.

ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಾವು ಸಲ್ಮಾನ್ ಖಾನ್‌ನ ಒಟ್ಟಾರೆ ಭದ್ರತೆಯನ್ನು ಹೆಚ್ಚಿಸಿದ್ದೇವೆ. ರಾಜಸ್ಥಾನದ ಗ್ಯಾಂಗ್‌ನಿಂದ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ಅವರ ಅಪಾರ್ಟ್ಮೆಂಟ್ ಸುತ್ತಲೂ ಪೊಲೀಸರು ಇರುತ್ತಾರೆ.” ಎಂದು ಹೇಳಿದ್ದಾರೆ.

ಬಿಷ್ಣೋಯಿ ಅವರ ನಿಕಟವರ್ತಿ ರಾಹುಲ್ ಅಲಿಯಾಸ್ ಸುನ್ನಿಯನ್ನು 2020ರಲ್ಲಿ ಕೊಲೆ ಆರೋಪದಲ್ಲಿ ಬಂಧಿಸಲಾಯಿತ್ತು. ಅವರು ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top