ಖ್ಯಾತ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಜನಪ್ರಿಯ ಗಾಯಕ ಕೆಕೆ ಮಂಗಳವಾರ ತಮ್ಮ 53 ನೇ ವಯಸ್ಸಿನಲ್ಲಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದರು..
What a tragedy!
One of the finest singers is no more. Video of #KK last performance in Kolkata. #RIPKK #RIP pic.twitter.com/6plLyoEV3t
— Marya Shakil (@maryashakil) May 31, 2022
‘ಕೋಲ್ಕತ್ತದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕೆಕೆ ಅವರು ಸುಮಾರು ಒಂದು ಗಂಟೆ ಕಾಲ ಹಾಡಿದ್ದರು. ಆದರೆ, ಹೋಟೆಲ್ ತಲುಪಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
#WATCH | Singer KK died hours after a concert in Kolkata on May 31st. The auditorium shares visuals of the event held some hours ago. KK was known for songs like 'Pal' and 'Yaaron'. He was brought dead to the CMRI, the hospital told.
Video source: Najrul Manch FB page pic.twitter.com/YiG64Cs9nP
— ANI (@ANI) May 31, 2022
ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ 3 ದಶಕಗಳ ಕಾಲ ಕೆಕೆ ಹಾಡಿದ್ದರು. ಕನ್ನಡದ ರೌಡಿ ಅಳಿಯ, ಮನಸಾರೆ, ಮಳೆ ಬರಲಿ.. ಮಂಜು ಇರಲಿ ಚಿತ್ರಗಳಲ್ಲಿ ಹಾಡಿಗೆ ದನಿ ಆಗಿದ್ದಾರೆ. 1968ರ ಆಗಸ್ಟ್ 23ರಂದು ದೆಹಲಿಯಲ್ಲಿ ಜನಸಿದ್ದ ಕೃಷ್ಣ ಕುಮಾರ್ ಕುನ್ನತ್ ಅವರು ಕೆಕೆ ಎಂದು ಪ್ರಸಿದ್ಧರಾಗಿದ್ದರು. ಖ್ಯಾತ ಗಾಯಕ ಎ.ಆರ್ ರೆಹಮಾನ್ ಅವರು ಕುನ್ನತ್ ಅವರನ್ನ ಚಿತ್ರರಂಗಕ್ಕೆ ಪರಿಚಯ ಮಾಡಿಸಿದ್ದರು.
His last concert..last song 😭 tbh my Spotify playlist is full of KK songs..heartbreaking news #RIPKK pic.twitter.com/TUSSRcJkos
— gungun♡ (@thoughtfulkid_) May 31, 2022
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
