ಕಿರುತೆರೆ ಷೋ ಮತ್ತು ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಪ್ರ್ಯಾಂಕ್ ಮಾಡುವುದು ಸಾಮಾನ್ಯ. ಕೆಲವೊಮ್ಮೆ ಇದು ವಿಕೋಪಕ್ಕೆ ತಿರುಗುವ ಸಾಕಷ್ಟು ನಿದರ್ಶನಗಳಿವೆ. ಕೆಲವರು ಇದನ್ನು ಹಗುರವಾಗಿ ಸ್ವೀಕರಿಸಿದರೆ ಇನ್ನೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರ್ಯಾಂಕ್ ವಿಡಿಯೋದಿಂದ (Prank Video) ಕೆಲವೊಮ್ಮೆ ಶೋನಿಂದ ಸ್ಟಾರ್ಗಳು ಅರ್ಧಕ್ಕೆ ಎದ್ದು ಹೋಗಿದ್ದೂ ಇದೆ. ಇನ್ನೂ ಕೆಲವರು ಕಣ್ಣೀರು ಹಾಕುತ್ತಾರೆ. ಈಗ ನಟಿ ಕೃತಿ ಶೆಟ್ಟಿ ಅವರು ಪ್ರ್ಯಾಂಕ್ ನಿಂದಾಗಿ ವೇದಿಕೆ ಮೇಲೆಯೇ ಗಳಗಳನೆ ಕಣ್ಣೀರು ಹಾಕಿದ್ದಾರೆ.
ತಮಿಳಿನ ವಾಡ ಪೋಚೆ ಕಾರ್ಯಕ್ರಮದಲ್ಲಿ ನಟಿ ಕೃತಿ ಶೆಟ್ಟಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಸದಾ ಇಬ್ಬರು ನಿರೂಪಕರಾಗಿರುತ್ತಾರೆ. ಇಬ್ಬರೂ ಕೂಡ ನಟಿ ಕೃತಿ ಶೆಟ್ಟಿ ಅವರನ್ನು ಪ್ರಶ್ನೆಗಳನ್ನು ಕೇಳಿದ್ದಾರೆ. ಇದ್ದಕ್ಕಿದ್ದ ಹಾಗೇ ನಿರೂಪಕರ ನಡುವೆ ಜಗಳ ಶುರುವಾಗಿದೆ. ನೋಡ ನೋಡತ್ತಲೇ ಈ ಗಲಾಟೆ ಜೋರಾಗಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ತನ್ನ ಕಣ್ಣ ಮುಂದೆ ಹೀಗೆ ಆಗಿದ್ದನ್ನು ಕಂಡ ಕೃತಿ ಶೆಟ್ಟಿ ಶಾಕ್ಗೆ ಒಳಗಾಗಿದ್ದಾರು.
ಇದೊಂದು ಪ್ರ್ಯಾಂಕ್ ವಿಡಿಯೋ ಎಂದು ಕೃತಿಗೆ ಹೇಳಾಯಿತು. ಆದರೆ, ಅವರಿಗೆ ಆಗಲೇ ದುಃಖ ಉಮ್ಮಳಿಸಿ ಬಂದಿತ್ತು. ಅವರು ಗಳಗಳನೆ ಕಣ್ಣೀರು ಹಾಕಿದರು. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಕೆಲವರು ನಟಿಗೆ ಈ ರೀತಿ ಪ್ರ್ಯಾಂಕ್ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ.
ಇದು ತಮಾಷೆಗಾಗಿ ಮಾಡಿದ್ದು ಎಂದು ನಿರೂಪಕರು ಹೇಳುತ್ತಾರೆ. ಆದರೂ ಕೃತಿಗೆ ಅಳು ತಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕೃತಿ ಅತ್ತು ಬಿಡುತ್ತಾರೆ. “ಈ ರೀತಿ ಜೋರಾಗಿ ಜಗಳ ಆಡಿದರೆ ನನಗೆ ಆಗೋದಿಲ್ಲ” ಎಂದಿದ್ದಾರೆ ಕೃತಿ ಶೆಟ್ಟಿ. ನಂತರ ನಿರೂಪಕರು ಕೃತಿಯನ್ನು ಸಮಾಧಾನ ಮಾಡುತ್ತಾರೆ.
Prank goes wrong 🥺😮🤯
The prettiest @IamKrithiShetty
at #TheGalattaCrown2022 👑Watch the full video ▶️ https://t.co/VXFxNaytie#KrithiShetty pic.twitter.com/T5jiGDM55R
— Galatta Media (@galattadotcom) May 27, 2022
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
