fbpx
ಸಮಾಚಾರ

ನಾನು ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತಿ ಘೋಷಿಸಲು ಧೋನಿ ಮುಖ್ಯ ಕಾರಣ? ಸೆಹ್ವಾಗ್ ಈ ರೀತಿ ಹೇಳಲು ಕಾರಣವೇನು?

ಭಾರತ ತಂಡದ ಪರ ದೊಡ್ಡ ದೊಡ್ಡ ಪಂದ್ಯಗಳನ್ನು ಗೆದ್ದು ಕೊಟ್ಟ ಕೀರ್ತಿ ಇವರ ಹೆಸರಲ್ಲಿದೆ. ಇವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕೆಲವು ವರ್ಷಗಳ ಹಿಂದೆ ನಿವೃತ್ತಿಯನ್ನು ಘೋಷಿಸಿದರು. ಇದರ ಬೆನ್ನಲೇ ಇವರ ವಿರುದ್ಧ ಅನೇಕ ಆಟಗಾರರನ್ನು ಹೊರಹಾಕಿರುವ ಆರೋಪ ಕೇಳಿ ಬರುತ್ತಿತ್ತು. ಇದಕ್ಕೆ ಸತ್ಯ ಎಂಬಂತೆ ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಮಾತನಾಡಿದ್ದು, ಇದು ಬಹಳ ಚರ್ಚೆಗೆ ಕಾರಣವಾಗಿದೆ.

2007 ರಲ್ಲಿ ಧೋನಿಗೆ ಮೊದಲ ಬಾರಿ ಟೀಮ್ ಇಂಡಿಯಾದ ನಾಯಕತ್ವವನ್ನು ನೀಡಲಾಯಿತು. ಧೋನಿ, ಮೊದಲು ಟಿ 20 ಮತ್ತು ನಂತರ ಬಂದ ODI ನಲ್ಲಿ ನಾಯಕರಾಗಿದ್ದರು. ಇದೇ ಸಮಯದಲ್ಲಿ ಸೆಹ್ವಾಗ್ ಕಳಪೆ ಫಾರ್ಮ್ ನಲಿದ್ದರು. ಈಗಾಗಿ ಧೋನಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನಿರ್ಧರಿಸಿದರು. ಇದು ಸೆಹ್ವಾಗ್ ಅವರಿಗೂ ಒಂದು ದೊಡ್ಡ ಹೊಡೆತವನ್ನೇ ಕೊಟ್ಟಿತ್ತು. ಸೆಹ್ವಾಗ್ ಅವರನ್ನು ತಂಡದಿಂದ ಹೊರಹಾಕಲಾಗಿತ್ತು. ಇದು ಸೆಹ್ವಾಗ್ ಅವರ ಮನಸ್ಸನ್ನು ಬಹಳ ಕಾಡಿತ್ತು. ಇದರಿಂದ ತಾವು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಲು ಬಯಸಿದರು.

2008ರಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವೆ ತ್ರಿಕೋನ ಸರಣಿ ಆಯೋಜಿಸಲಾಗಿತ್ತು. ಈ ಸರಣಿಯಲ್ಲಿ ಸೆಹ್ವಾಗ್ ನೀರಸ ಪ್ರದರ್ಶನವನ್ನು ನೀಡಿದ್ದರು. ಆಡಿದ 4 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 64 ರನ್ ಮಾತ್ರ. ಇದೆ ಕಾರಣಕ್ಕೆ ಧೋನಿ ಸೆಹ್ವಾಗ್ ಅವರನ್ನು ತಂಡದಿಂದ ಕೈಬಿಟ್ಟಿದ್ದರು. ಇದು ಸೆಹ್ವಾಗ್ ಅವರ ಮನಸ್ಸಿಗೆ ಬಹಳ ನೋವುಂಟುಮಾಡಿ ಅವರು ಏಕದಿನ ಕ್ರಿಕೆಟ್​ಗೆ ನಿವೃತ್ತಿಯ ಬಗ್ಗೆ ಚಿಂತಿಸುತ್ತಿದ್ದರು.

ಇದರ ಕುರಿತು cricbuzz ಷೋ ಒಂದರಲ್ಲಿ ಮಾತನಾಡಿದ ಸೆಹ್ವಾಗ್ “2008 ರಲ್ಲಿ, ನಾವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ, ನಾನು ನಿವೃತ್ತಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿದೆ. ಏಕದಿನದಲ್ಲಿ ನನಗೆ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಧೋನಿ ನನ್ನನ್ನು ಆಡುವ XI ನಿಂದ ಕೈಬಿಟ್ಟರು. ಅದಕ್ಕಾಗಿಯೇ ನಾನು ಏಕದಿನ ಮಾದರಿಯನ್ನು ತೊರೆಯುವ ಆಲೋಚನೆಯನ್ನು ಪ್ರಾರಂಭಿಸಿದೆ” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top