ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚಾಗುತ್ತಿದೆ. ಅದರಲ್ಲೂ ಕಾಶ್ಮೀರಿ ಪಂಡಿತರನ್ನೇ ಅವರು ಟಾರ್ಗೆಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಯೋಧರ ವಾಹನ ಒಂದು ಸ್ಪೋಟಗೊಂಡು 3 ಯೋಧರು ಬಹಳ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶೋಪಿಯಾನ್ ಜಿಲ್ಲೆಯಲ್ಲಿ ಖಾಸಗಿ ವಾಹನದೊಂದಿಗೆ ಪ್ರಯಾಣಿಸುತ್ತಿದ್ದ ಯೋಧರ ವಾಹನವೊಂದು ಸ್ಫೋಟ ಗೊಂಡಿದೆ. ಇವರು ಪ್ರಯಾಣಿಸುತ್ತಿರುವಾಗಲೇ ವಾಹನ ಸ್ಪೋಟಗೊಂಡ ಕಾರಣ ಸೈನಿಕರಿಗೆ ಗಂಭೀರವಾದ ಗಾಯವಾಗಿದೆ. ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ಧಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಈ ಘಟನೆಯ ಕುರಿತು ಕಾಶ್ಮೀರಿ ಜೋನ್ ಮಹಾನಿರ್ದೇಶಕ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದು “ಮೂವರು ಸೈನಿಕರು ಖಾಸಗಿ ವಾಹನದಲ್ಲಿ ಪ್ರಯಾಣಿಸುತ್ತಿದ್ದು, ದಿಢೀರ್ ಎಂದು ವಾಹನ ಸ್ಫೋಟಗೊಂಡಿದೆ. ಈ ಹಿನ್ನೆಲೆ ಅವರಿಗೆ ಗಂಭೀರವಾಗಿ ಗಾಯವಾಗಿದೆ. ಸ್ಫೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.
A #blast took place inside a private hired vehicle at Sedow, #Shopian. 03 soldiers injured & shifted to Hospital. Nature & source (blast due to grenade or already planted IED inside vehicle or malfunctioning of battery) of blast being investigated & will be shared: IGP Kashmir
— Kashmir Zone Police (@KashmirPolice) June 2, 2022
ಇದು ಗ್ರೆನೇಡ್ನಿಂದ ಸ್ಫೋಟ ಗೊಂಡಿದ್ದ ಅಥವಾ ಬ್ಯಾಟರಿ ಸಮಸ್ಯೆಯಿಂದ ಸ್ಪೋಟಗೊಂಡಿದ್ದ ಎಂಬ ಮಾಹಿತಿ ದೊರಕಿಲ್ಲ. ಮೇಲ್ನೋಟಕ್ಕೆ ಗಮನಿಸಿದರೆ ಇದು ಗ್ರೆನೇಡ್ನಿಂದ ಸ್ಪೋಟಗೊಂಡಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದಕೆಲ್ಲ ಉತ್ತರ ಪ್ರಾರ್ಥಮಿಕ ತನಿಖೆ ನಡೆಸಿದ ಬಳಿಕವೇ ತಿಳಿಯುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
