ನಾವು ಚಿಕ್ಕವರಾಗಿದ್ದಾಗ ಹಲವಾರು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಡಿರುತ್ತೇವೆ. ಅದರಲ್ಲೂ ಹಾವು ಏಣಿ ಆಟ ಆಡದೇ ಇರೋರು ಇಲ್ಲವೇ ಇಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರಿನವರೆಗೂ ಪ್ರತಿಯೊಬ್ಬರೂ ಈ ಆಟವನ್ನು ಇಷ್ಟಪಟ್ಟು ಆಡುತ್ತಾರೆ. ಆದರೆ ಇಲ್ಲಿಯವರೆಗೂ ಯಾರಾದರೂ ಈ ಆಟದ ಬಗ್ಗೆ ಯೋಚಿಸಿದ್ದೀರಾ? ಈ ಆಟ ಯಾಕೆ ಹೀಗಿದೆ? ಇದರ ಹಿನ್ನೆಲೆ ಏನು ಅಂತ. ಇದರ ಕುರಿತು ಮಾಹಿತಿ ಇಲ್ಲಿದೆ.
ಇತಿಹಾಸಕಾರರ ಪ್ರಕಾರ ಭಾರತದಲ್ಲಿ ಮೊದಲ ಹಾವು-ಏಣಿ ಆಟವನ್ನು ಕ್ರಿಸ್ತಪೂರ್ವ ಎರಡನೇ ಶತಮಾನದಲ್ಲಿ ಆರಂಭಿಸಲಾಯಿತು. ಇದು ಮಕ್ಕಳಲ್ಲಿ ನೈತಿಕತೆಯನ್ನು ಹೆಚ್ಚಿಸಲು ಶುರು ಮಾಡಲಾಗಿತ್ತು. ಈ ಆಟವನ್ನು ಗಮನಿಸಿದರೆ ಇದರಲ್ಲಿ ಹಾವು ಮತ್ತು ಏಣಿ ಕಾಣುತ್ತದೆ.
ಏಣಿಯು ಮೋಕ್ಷ ಮತ್ತು ಪುಣ್ಯವನ್ನು ಸೂಚಿಸಿದರೆ ಹಾವುಗಳು ಪಾಪವನ್ನು ಪ್ರತಿನಿಧಿಸುತ್ತದೆ. ಈ ಆಟ ನಮ್ಮನ್ನು ಹಂತ ಹಂತವಾಗಿ 100 ನೇ ಮನೆಗೆ ಕರೆದುಕೊಂಡು ಹೋಗುತ್ತದೆ. ಅದು ನಮಗೆ ಮುಕ್ತಿ. ಈ ಮುಕ್ತಿ ಹಂತ ತಲುಪಲು ನಮಗೆ ಹಲವಾರು ಸವಾಲುಗಳು ಹಾವು ಮತ್ತು ಏಣಿಯ ರೂಪದಲ್ಲಿ ಕಾಡುತ್ತಿರುತ್ತದೆ.
ಹತ್ತೊಂಬತ್ತನೇ ಶತಮಾನದಲ್ಲಿ ಈ ಆಟವು ಬ್ರಿಟಿಷರಲ್ಲಿ ಬಹಳ ಜನಪ್ರಿಯವಾಯಿತು. ಈ ಆಟವು ಇಂಗ್ಲೆಂಡ್ ಮೂಲಕ ಅನೇಕ ಬ್ರಿಟಿಷ್ ವಸಾಹತುಗಳಿಗೆ ಹರಡಿತು ಎಂದು ಹೇಳಲಾಗಿದೆ. ಇದನ್ನು1943 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಆಡಲಾರಂಭಿಸಿದರು. ಈ ವೇಳೆ ಇದನ್ನು “ಶೂಟ್ ಮತ್ತು ಲೋಡರ್” ಎಂದು ಕರೆಯುತ್ತಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
