ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23 ನೇ ಓವರ್‌ನ ನಂತರ ನಿಲ್ಲಿಸಲಾಯಿತು.
After 23 overs, the game pauses for 23 seconds of applause in memory of the the great Shane Warne 👏❤️ pic.twitter.com/zr2Ih2XK7o
— Sky Sports Cricket (@SkyCricket) June 2, 2022
23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.
After 23 overs, the game pauses for 23 seconds of applause in memory of the the great Shane Warne 👏❤️ pic.twitter.com/zr2Ih2XK7o
— Sky Sports Cricket (@SkyCricket) June 2, 2022
ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.
ಅಂದಹಾಗೆ ಇತ್ತೀಚಿಗೆ ಶೇನ್ ವಾರ್ನ್ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಅಕಾಲಿಕ ನಿಧಾನಕ್ಕೆ ಇಡೀ ಕ್ರೀಡಾ ಜಗತ್ತೇ ಕಂಬನಿ ಮಿಡಿದಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
