ಹಣ ಎಂಬುದು ಇದೀಗ ಪ್ರತಿಯೊಬ್ಬರ ಜೀವನದಲ್ಲೂ ಅತಿ ಮುಖ್ಯವಾದ ಅಂಶವಾಗಿದೆ. ಹೀಗಾಗಿ ಜನರು ಹಣ ಗಳಿಸಲು ಅನ್ಯ ಮಾರ್ಗದಲ್ಲಿ ಹೋಗಲು ಇಚ್ಚಿಸುತ್ತಾರೆ. ಇದೀಗ ಇದೇ ರೀತಿ ಹಣ ಗಳಿಸಲು ಹೋಗಿ ಸ್ಯಾಂಡಲ್ವುಡ್ ನ ನಿರ್ಮಾಪಕರೊಬ್ಬರು ಪೋಲೀಸರ ಅತಿಥಿಯಾಗಿದ್ದಾರೆ.
ಹಾಸ್ಯ ನಟ ಕೋಮಲ್ ಅಭಿನಯದ ಲೊಡ್ಡೆ ಸಿನಿಮಾದ ನಿರ್ಮಾಪಕರಾದ ಮಂಜುನಾಥ್ ಸಿನಿಮಾಕ್ಕೆ ಕೋಟಿ ಕೋಟಿ ಬಂಡವಾಳ ಹಾಕಿ ಲಾಭ ಬರದೇ ಕೈ ಸುಟ್ಟುಕೊಂಡಿದ್ದರು. ಈ ಸಿನಿಮಾ ರಿಲೀಸ್ ಆದರೂ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲಿಲ್ಲ. ಇದರಿಂದ ಬಹಳಷ್ಟು ನಷ್ಟ ಅನುಭವಿಸಿದ್ದ ಮಂಜುನಾಥ್ ಹಣ ಗಳಿಸಲು ಅನ್ಯ ಮಾರ್ಗವನ್ನು ಅವಲಂಭಿಸಿದರು. ಆದರೆ ಇದೀಗ ಇವರ 4 ಜನ ಗೆಳೆಯರೊಂದಿಗೆ ಪೋಲೀಸರ ಅತಿಥಿಯಾಗಿದ್ದಾರೆ.
ಮಂಜುನಾಥ್ ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಎಂಬ ಕಂಪನಿ ಹೆಸರಲ್ಲಿ ಕಚೇರಿ ತೆರೆದು ಇಲ್ಲಿ ಸೈಟ್, ನಿವೇಶನಗಳನ್ನು ಸೇಲ್ ಮಾಡಿಸಿಕೊಡುವುದಾಗಿ ಹೇಳಿ ಜಾಹಿರಾತನ್ನು ಸಹ ಪ್ರಿಂಟ್ ಮಾಡಿಸಿದ್ದರು. ಈ ಜಾಹಿರಾತನ್ನು ವೀಕ್ಷಿಸಿದ ಪುಷ್ಪಕುಮಾರ್ ಎಂಬಾತ ಮಂಜುನಾಥ್ ಅವರನ್ನು ಭೇಟಿ ಮಾಡಿದರು.
ಮಂಜುನಾಥ್ ಇವರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಹಂತ ಹಂತವಾಗಿ ಇವರ ಹತ್ತಿರ 2 ಲಕ್ಷ ಹಾಕಿಸಿಕೊಂಡಿದ್ದಾರೆ. ನಂತರ ಬೇರೆ ಯಾರದ್ದೋ ನಿವೇಶನ ತೋರಿಸಿ ಕೊಡಿಸುವುದಾಗಿ ನಂಬಿಸಿದರು. ಸೈಟ್ ಬಗ್ಗೆ ದಾಖಲೆ ಕೇಳಿದಾಗ ನಿಜಾಂಶ ಹೊರಬಂದಿದೆ. ತಮಗೆ ಆಗಿರುವ ಅನ್ಯಾಯದ ಕುರಿತು ಪುಷ್ಪಕುಮಾರ್ ರಾಜಾಜಿನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದರು. ದೂರನ್ನು ಧಾಖಲಿಸಿರುವ ಪೊಲೀಸರು ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್, ಚಂದ್ರಶೇಖರ್‍ನನ್ನು ಬಂಧಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
