fbpx
ಸಮಾಚಾರ

ಕರಣ್ ಜೋಹರ್ ಹುಟ್ಟುಹಬ್ಬಕ್ಕೆ ಬಂದ 55 ಮಂದಿಗೆ ಕೊರೊನಾ?

ಬಾಲಿವುಡ್‌ನ ಖ್ಯಾತ ನಿರ್ದೇಶಕ/ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಮುಂಬೈನ ಸ್ಟುಡಿಯೋವೊಂದರಲ್ಲಿ ಕರಣ್ ಜೋಹರ್ ತಮ್ಮ ಜನ್ಮದಿನವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡರು. ಬಾಲಿವುಡ್‌ನ ತಾರೆಯರಿಗಾಗಿ ಕರಣ್ ಜೋಹರ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಿಂದಾಗಿ 50-55 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ವರದಿಯಾಗಿದೆ.

ಈ ಬರ್ತಡೇ ಪಾರ್ಟಿಗೆ ಇಡೀ ಬಾಲಿವುಡ್ ಚಿತ್ರರಂಗನೇ ಸಾಕ್ಷಿಯಾಗಿತ್ತು. ಕರಣ್ ಆಹ್ವಾನಕ್ಕೆ ಓಗೊಟ್ಟು ಅನೇಕ ಸೆಲೆಬ್ರಿಟಿಗಳು ಬರ್ತಡೇಗೆ ಹಾಜರ್ ಆಗಿದ್ದರು. ಇದೀಗ ಬರ್ತಡೇ ಪಾರ್ಟಿನೇ ಅನೇಕರಿಗೆ ಕುತ್ತು ತಂದಿದೆ. ಈ ಪೈಕಿ ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಕುರಿತು ಇನ್ನಷ್ಟೇ ಕರಣ್ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ.

ಆಂಗ್ಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಕರಣ್ ಜೋಹರ್ ಬರ್ತಡೇ ಪಾರ್ಟಿ ಬಳಿಕ ಬಾಲಿವುಡ್‌ನ ಅನೇಕ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ವಿಚಾರವನ್ನು ಯಾರು ರಿವೀಲ್ ಮಾಡಿಲ್ಲ. ಈ ಹಿಂದೆಯೂ ಕರಣ್ ಬರ್ತಡೇ ಪಾರ್ಟಿ ನೆಗೆಟಿವ್ ವಿಚಾರವಾಗಿ ಸುದ್ದಿಯಾಗಿತ್ತು. ಹಾಗಾಗಿ ಮತ್ತೆ ವಿವಾದವಾಗುವುದು ಬೇಡ ಎನ್ನುವ ಕಾರಣಕ್ಕೆ ಈ ಬಾರಿ ಕೊರೊನಾ ಸೋಂಕು ತಗುಲಿದ್ದ ವಿಚಾರವನ್ನು ಮುಚ್ಚಿಡಲಾಗಿದೆ ಎನ್ನಲಾಗುತ್ತಿದೆ.

ಅಂದಹಾಗೆ ಸಲ್ಮಾನ್​ ಖಾನ್​, ಆಮಿರ್​ ಖಾನ್​, ಶಾರುಖ್​ ಖಾನ್​, ಸೈಫ್​ ಅಲಿ ಖಾನ್​, ರಶ್ಮಿಕಾ ಮಂದಣ್ಣ, ಅನನ್ಯಾ ಪಾಂಡೆ, ಜಾನ್ವಿ ಕಪೂರ್​, ವಿಕ್ಕಿ ಕೌಶಲ್​, ಮಲೈಕಾ ಅರೋರಾ, ಟ್ವಿಂಕಲ್​ ಖನ್ನಾ, ಟಬು, ಸೊನಾಲಿ ಬೇಂದ್ರೆ, ಮಾಧುರಿ ದೀಕ್ಷಿತ್​, ರವೀನಾ ಟಂಡನ್​, ಜೂಹಿ ಚಾಚ್ಲಾ ಸೇರಿದಂತೆ ಅನೇಕ ಹಿರಿ-ಕಿರಿಯ ಸೆಲೆಬ್ರಿಟಿಗಳು ಪಾ​ರ್ಟಿಗೆ ಬಂದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top