ಬಲಪಂಥೀಯ ಲೇಖಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್ ಅನ್ನು ವೈಭವೀಕರಿಸಲಾಗಿದೆ ಅಲ್ಲದೆ ಅಂಬೇಡ್ಕರ್, ಕುವೆಂಪು, ಬಸವಣ್ಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮದ್ಯೆ ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು ಬಯಲಾಗಿದೆ.
ಇದೀಗ ತರಗತಿಯೊಂದರ ಪಠ್ಯದಲ್ಲಿ ಚಿತ್ರ ಸಾಹಿತಿ ಚಿ.ಉದಯಶಂಕರ್ ಅವರ ಅವರ ರಚನೆಯ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’ (ಡಾ.ರಾಜ್‌ಕುಮಾರ್ ಅವರ ಕಸ್ತೂರಿ ನಿವಾಸ ಚಿತ್ರದ ಪ್ರಮುಖ ಹಾಡು) ಗೀತೆಯನ್ನು ಆರ್.ಎನ್.ಜಯಗೋಪಾಲ್ ಅವರು ರಚಿಸಿದ್ದು ಎಂದು ತಪ್ಪಾಗಿ ಮುದ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗೀತೆಯ ರಚನಕಾರರ ಸ್ಥಳದಲ್ಲಿ ಉದಯಶಂಕರ್ ಹೆಸರು ಬದಲು ಆರ್.ಎನ್. ಜಯಗೋಪಾಲ್ ಅವರ ಹೆಸರಿರುವ ಪಠ್ಯದ ಪುಟವೊಂದರ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕನ್ನಡ ಭಾಷೆಯ 7ನೇ ತರಗತಿಯ ಶಾಲಾ ಪಠ್ಯದಲ್ಲಿ ಎಡವಟ್ಟು ನಡೆದಿದೆ. ಗೊಂಬೆ ಕಲಿಸುವ ನೀತಿ ಪಾಠದ ಕವಿ ಹೆಸರನ್ನು ರೋಹಿತ್ ಚಕ್ರತೀರ್ಥ ಸಮಿತಿ ತಿರುಚಿದೆ ಎನ್ನಲಾಗುತ್ತಿದೆ. ಚಿ.ಉದಯ ಶಂಕರ್ ಬರೆದ ಹಾಡನ್ನ R.N.ಜಯಗೋಪಾಲ್ ಬರೆದಿದ್ದಾರೆ ಎಂದು ಹೆಸರು ಹಾಕಲಾಗಿದೆ. ಈ ಮೂಲಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯ ಎಡವಟ್ಟು ನಗೆಪಾಟಲಿಗೆ ಕಾರಣವಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
