fbpx
ಸಮಾಚಾರ

“ಕನ್ನಡಿಗರನ್ನು ತಾಯಿಯಿಂದ ದೂರ ಮಾಡಬೇಡಿ.. ಆ ಶಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ” ಸಿಎಂ ಬೊಮ್ಮಾಯಿ, ಶಿಕ್ಷಣ ಸಚಿವರ ವಿರುದ್ಧ ಸಂಸದ ಜಿಸಿ ಚಂದ್ರಶೇಖರ್ ಆಕ್ರೋಶ

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಅಲ್ಲದೆ ಅಂಬೇಡ್ಕರ್, ಕುವೆಂಪು, ಬಸವಣ್ಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮದ್ಯೆ ರೋಹಿತ್ ಚಕ್ರತೀರ್ಥ ಸಮಿತಿಯಿಂದ ಮತ್ತೊಂದು ಯಡವಟ್ಟು ಬಯಲಾಗಿದೆ.

 

 

ಇದೀಗ ಕನ್ನಡ ರಾಜ್ಯೋತ್ಸವದ ಕುರಿತು ಆರನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ತಾಯಿ ಭುವನೇಶ್ವರಿಯ ‘ಮೆರವಣಿಗೆ’ ಕುರಿತ ಪಾಠವನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಕೈಬಿಟ್ಟಿರುವ ಆರೋಪ ಕೇಳಿ ಬಂದಿದೆ. 6ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿ ಆರನೇ ಪಾಠವಾಗಿ ಮೆರವಣಿಗೆ ಪಾಠವಿತ್ತು. ಈ ಪಠ್ಯವನ್ನು ಹಿಂದಿನ ಸಮಿತಿಯೇ ರೂಪಿಸಿತ್ತು. ಕನ್ನಡ ರಾಜ್ಯೋತ್ಸವಕ್ಕಾಗಿ ಶಾಲೆಯೊಂದರಲ್ಲಿ ನಡೆದ ಸಿದ್ಧತೆ, ನವೆಂಬರ್‌ 1ರ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಹಾಗೂ ಭುವನೇಶ್ವರಿ ತಾಯಿಯ ಮೆರವಣಿಗೆಯನ್ನು ತಿಳಿಸುವ ಪಾಠ ಇದಾಗಿತ್ತು. ಆದರೆ, ಈ ಪಾಠವನ್ನು ಚಕ್ರತೀರ್ಥ ಸಮಿತಿ ಕೈಬಿಟ್ಟು ವಿಕೃತಿ ಮೆರೆದಿದೆ.

 

 

ರಾಜ್ಯೋತ್ಸವ ಕುರಿತ ಪಾಠವನ್ನು ತೆಗೆದುಹಾಕಿ ಸಿದ್ದಾರೂಢ ಜಾತ್ರೆಯ ಪಾಠವನ್ನು ಸೇರಿಸಿದೆ. ಕನ್ನಡ ಬಾವುಟವನ್ನು ಹೊತ್ತ ತಾಯಿ ಭುವನೇಶ್ವರಿ ಚಿತ್ರವನ್ನು ಹಳೆಯ ಪಠ್ಯದಲ್ಲಿ ಕಾಣಹುದಿತ್ತು. ಆದರೆ ಹೊಸ ಪಠ್ಯದಲ್ಲಿ ತೇರಿನ ಮುಂದೆ ಕೇಸರಿ ಭಾವುಟಗಳು ಹಾರಾಡುತ್ತಿರುವ ಚಿತ್ರವನ್ನು ಕಾಣಬಹುದು. ಸಿದ್ಧಾರೂಢರ ಜಾತ್ರೆಯನ್ನು ಪಠ್ಯದಲ್ಲಿ ಸೇರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ, ರಾಜ್ಯೋತ್ಸವ ಪಾಠವನ್ನು ತೆಗೆಯುವ ಬದಲು ಅದನ್ನು ಹಾಗೇ ಉಳಿಸಿಕೊಂಡು ಜಾತ್ರೆಯ ಪಾಠವನ್ನು ಬೇರೆಡೆ ಸೇರಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ‘ಮೆರವಣಿಗೆ’ ಪಾಠವನ್ನು ಉಳಿಸಿಕೊಂಡು, ಬೇರೆ ಯಾವುದಾದರೂ ಪಠ್ಯದಲ್ಲಿ ‘ಸಿದ್ಧಾರೂಢರ ಜಾತ್ರೆ’ಯ ಪಾಠವನ್ನು ಇಡಬಹುದಿತ್ತು.

 

 

ಪಠ್ಯದಲ್ಲಿ ರಾಜ್ಯೋತ್ಸವದ ಪಾಠ ಕೈಬಿಟ್ಟ ವಿಚಾರವಾಗಿ ರಾಜ್ಯಸಭೆ ಸಂಸದ ಜಿಸಿ ಚಂದ್ರಶೇಖರ್ ಅವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಈ ಪೋಸ್ಟ್ ನಲ್ಲಿ ಸಿಎಂ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. “ಕನ್ನಡ ಮತ್ತು ತಾಯಿ ಭುವನೇಶ್ವರಿ ಧರ್ಮ ಜಾತಿಗಳಿಗೂ ಮಿಗಿಲಾದದ್ದು. ಯಾರಾದರೂ ನಮ್ಮ ಕರ್ನಾಟಕ ಬಾವುಟವನ್ನು ಸುಟ್ಟರೆ ನಮ್ಮ ತಾಯಿಯನ್ನೇ ಸುಟ್ಟಷ್ಟು ಅನುಭವವಾಗುತ್ತದೆ ಮತ್ತು ಕೋಪ ಬರುತ್ತದೆ. ನಿಮ್ಮ ಸರ್ಕಾರ ರಚನೆ ಮಾಡಿರುವ ಪಠ್ಯಪುಸ್ತಕ ಸಮಿತಿ ತಾಯಿ ಭುವನೇಶ್ವರಿಯ ಜಾತ್ರೆ ಮತ್ತು ಕರ್ನಾಟಕ ಬಾವುಟವನ್ನು ತೆಗೆದು ಹಾಕಿರುವುದು ನಮ್ಮ ಕನ್ನಡಿಗರಿಗೆ ತಮ್ಮ ತಾಯಿಯನ್ನು ದೂರ ಮಾಡಿದಷ್ಟೇ ಸಂಕಟವಾಗುತ್ತದೆ. ಈ ನಿಮ್ಮ ಒಂದು ನಡೆಯಿಂದ ಕನ್ನಡಿಗರಿಗೆ ಆಗುವ ಕಷ್ಟ ಮತ್ತು ನಷ್ಟ ನಿಮಗೇ ಅರ್ಥವಾಗುತ್ತದೆಯೇ? ಕನ್ನಡಿಗರನ್ನು ಅವರ ತಾಯಿ ಭುವನೇಶ್ವರಿ ಇಂದ ದೂರಮಾಡುವ ಈ ನಿಮ್ಮ ಕ್ರಮ ದ ಬಗ್ಗೆ ಕನ್ನಡಿಗರ ಶಾಪ ತಟ್ಟದೆ ಇರುತ್ತದೆಯೇ? ” ಎಂದು ಜಿಸಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top