ಇಂಗ್ಲೆಂಡ್ ಕ್ರಿಕೆಟ್ ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿರುವ ಜೋ ರೂಟ್ ಪ್ರಸಕ್ತ ವಿಶ್ವಕ್ರಿಕೆಟ್ ನ ಅತ್ಯುತ್ತಮ ಬ್ಯಾಟರ್ ಗಳಲ್ಲಿ ಒಬ್ಬರು. ಇತ್ತೀಚಿಗೆ ನಡೆದ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಪಂದ್ಯದ ವೇಳೆಯಲ್ಲೇ ಜೋ ರೂಟ್ 10 ಸಾವಿರ ಟೆಸ್ಟ್ ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಇಂಗ್ಲೆಂಡ್ನ ಎರಡನೇ ಬ್ಯಾಟರ್ ಎನ್ನುವ ಶ್ರೇಯಕ್ಕೆ ಜೋ ರೂಟ್ ಪಾತ್ರರಾಗಿದ್ದರು. ಇದೆಲ್ಲರ ನಡುವೆ ಜೋ ರೂಟ್ ಕೈಯಲ್ಲಿದ್ದ ಮ್ಯಾಜಿಕ್ ಬ್ಯಾಟ್ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಲಾರಂಭಿಸಿದೆ.
Seriously is that bat holding itself up or is Joe Root even more of a magician?? @BumbleCricket @root66 #ENGvsNZ pic.twitter.com/bcHVvPngY4
— Webbo (@WebboOne) June 5, 2022
ಪಂದ್ಯದ ನಡುವೆ ನಾನ್ಸ್ಟ್ರೈಕ್ನಲ್ಲಿದ್ದ ರೂಟ್ ತಮ್ಮ ಬ್ಯಾಟ್ನ್ನು ಹಿಡಿಯದೆ ನೇರವಾಗಿ ನಿಲ್ಲಿಸಿ ಬಿಟ್ಟಿದ್ದರು. ಕೆಲ ನಿಮಿಷಗಳ ಕಾಲ ಬ್ಯಾಟ್ ಬಿಟ್ಟು ರೂಟ್ ನಿಂತಿದ್ದ ಫೋಟೋ ಇದೀಗ ವೈರಲ್ ಆಗುತ್ತಿದೆ. ಈ ಫೋಟೋ ಗಮನಿಸಿದ ಬಳಿಕ ಕ್ರಿಕೆಟ್ ಅಭಿಮಾನಿಗಳು ರೂಟ್ ಬ್ಯಾಟಿಂಗ್ನಲ್ಲಿ ಪ್ರತಿಭಾವಂತ ಎಂಬುದನ್ನು ನೋಡಿದ್ದೇವೆ ಇದೀಗ ಇದೇನಿದು ಮ್ಯಾಜಿಕ್ ಮಾಡುತ್ತಿರುವುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
The wizard of England cricket with his magical NB bat creating magic in the cricket world👑@root66 pic.twitter.com/txwEb8Dxga
— Ayesha (@JoeRoot66Fan) June 6, 2022
ಅರೇ, ಇದು ಹೇಗೆ ಸಾಧ್ಯ ಎಂದು ಅಚ್ಚರಿಗೊಂಡಿದ್ದಾರೆ. ಕೆಲವರು ಈ ಬಗ್ಗೆ ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಪಂದ್ಯದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದಿರುವ ಇಂಗ್ಲಿಷ್ ಜರ್ನಲಿಸ್ಟ್ ಒಬ್ಬರು, ರೂಟ್ ಅವರ ಬ್ಯಾಟ್ನ ಕೆಳ ಪದರ ಅಗಲವಾಗಿದೆ, ಅದರ ಕೆಳಭಾಗ ಸಮತಟ್ಟಾಗಿದೆ. ಹೀಗಾಗಿ ಬ್ಯಾಟ್ ಯಾವುದೇ ಆಧಾರವಿಲ್ಲದೆ ಮೈದಾನದಲ್ಲಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
