fbpx
ಸಮಾಚಾರ

ಭಾರತ ದಕ್ಷಿಣ ಆಫ್ರಿಕಾ ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ! ಅಭಿಮಾನಿಗಳ ಗಮನ ಈ ನಾಲ್ಕು ಆಟಗಾರರ ಮೇಲೆ ಇದೆ- ಯಾರದು ಗೊತ್ತಾ?

ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿ ಆರಂಭವಾಗಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಲು ಪ್ರತಿಯೊಬ್ಬರೂ ಕಟ್ಟುನಿಟ್ಟಿನ ಅಭ್ಯಾಸ ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕೆಲ ಸ್ಟಾರ್ ಆಟಗಾರರು ಇಲ್ಲದೆ ಇದ್ದರು ಕೂಡ ಅಭಿಮಾನಿಗಳ ಗಮನ ಕೆಲವು ಪ್ರತಿಭಾನ್ವಿತ ಯುವ ಆಟಗಾರರ ಮೇಲೆ ಇದೆ. ಈ ಯುವ ಆಟಗಾರರು ಮಿಂಚಿದರೆ ಭಾರತ ಉತ್ತಮ ಪ್ರದರ್ಶನ ತೋರುವುದರಲ್ಲಿ ಯಾವುದೇ ಅನುಮಾನವಿಲ್ಲ.

ದಿನೇಶ್ ಕಾರ್ತಿಕ್:
ಆರ್ ಸಿ ಬಿ ಪರ ಮ್ಯಾಚ್ ಫಿನಿಶರ್ ಆಗಿ ಮಹತ್ವದ ಪಾತ್ರ ವಹಿಸಿದ ಸ್ಟಾರ್ ಬ್ಯಾಟ್ಸಮನ್ ಇವರು. ಸುಮಾರು ವರ್ಷಗಳ ಬಳಿಕ ಇವರಿಗೆ ಮತ್ತೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ದೊರೆತಿದೆ. ಈ ಅವಕಾಶವನ್ನು ಇವರು ಸದುಪಯೋಗಪಡಿಸಿಕೊಂಡು ಉತ್ತಮ ಪ್ರದರ್ಶನ ತೋರುತ್ತಾರೆ ಎಂಬ ನಂಬಿಕೆ ಅಭಿಮಾನಿಗಳ ಮನಸಲ್ಲಿ ಇದೆ.

 

 

ಇಶಾನ್ ಕಿಶನ್:
ಭಾರತ ತಂಡದ ಮೋಸ್ಟ ಡೇಂಜರಸ್ ಎಡಗೈ ಬ್ಯಾಟ್ಸಮನ್ ಇವರು. ಈ ಸರಣಿಯಲ್ಲಿ ಇವರ ಪಾತ್ರ ಮಹತ್ವವಾದದ್ದು. ಏಕೆಂದರೆ ಇವರು ನಾಯಕ ರಾಹುಲ್ ಅವರೊಂದಿಗೆ ಓಪನಿಂಗ್ ಮಾಡಲಿದ್ದಾರೆ. ಈಗಾಗಿ ಇವರ ಮೇಲೆ ಬೆಟ್ಟದಂತ ನಿರೀಕ್ಷೆ ಇದೆ. ಪ್ರಸ್ತುತ ಐಪಿಎಲ್ ನಲ್ಲಿ ಇವರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಟೀಮ್ ಇಂಡಿಯಾ ಸರಣಿಯಲ್ಲಿ ಇವರು ಮಿಂಚಿದರೆ ಗೆಲುವು ಸಾಧಿಸೋದು ಭಾರತಕ್ಕೆ ಸುಲಭದ ವಿಷಯವಾಗುತ್ತದೆ.

 

 

ಹಾರ್ಧಿಕ್ ಪಾಂಡ್ಯ:
ಭಾರತ ತಂಡದ ಪರ ಫಿನಿಶರ್ ಆಗಿ ಕೆಲಸ ಮಾಡುತ್ತಿದ್ದ ಇವರು ಕಳಪೆ ಪ್ರದರ್ಶನದಿಂದ ತಂಡದಿಂದ ಹೊರಗುಳಿದಿದ್ದರು. ಆದರೆ ಗುಜರಾತ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ತೋರಿ ತಂಡಕ್ಕೆ ಕಪ್ ಗೆಲ್ಲುವಂತೆ ಮಾಡಿದರು. ಇವರ ಉತ್ತಮ ಪ್ರದರ್ಶನದಿಂದ ಮತ್ತೆ ತಂಡಕ್ಕೆ ಆಯ್ಕೆ ಆಗಿದ್ದಾರೆ. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಾರಾ ಕಾದು ನೋಡಬೇಕು.

 

 

ಹರ್ಷಲ್ ಪಟೇಲ್:
ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಪ್ರಖ್ಯಾತಿ ಗಳಿಸಿದ ಆರ್ ಸಿ ಬಿ ತಂಡದ ಶ್ರೇಷ್ಠ ಬೌಲರ್ ಇವರು. ಇವರು ಆರ್ ಸಿ ಬಿ ಪರ ಆಪತ್ಬಾಂದವನಾಗಿ ತುಂಬಾ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇವರ ಈ ಅದ್ಭುತ ಪ್ರದರ್ಶನದ ಕಾರಣ ಇವರನ್ನು ಟೀಮ್ ಇಂಡಿಯಾ ತಂಡಕ್ಕೆ ಆಯ್ಕೆಮಾಡಲಾಗಿದೆ. ಈಗಾಗಿ ಟೀಮ್ ಇಂಡಿಯಾ ಪರ ಇವರು ಮಿಂಚಿದರೆ ಗೆಲುವು ನಮ್ಮ ಕಡೆ ಎಂಬ ಮಾತಿನಲ್ಲಿ ಯಾವುದೇ ಸಂಶಯವಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top