ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ರಾಜ್ಯದಂತ ಬಿಡುಗಡೆ ಆಗಿ ಸಕತ್ ಸೌಂಡ್ ಮಾಡುತ್ತಿದೆ. ಈ ಚಿತ್ರ ಕರ್ನಾಟಕದಲ್ಲೂ ಬಿಡುಗಡೆ ಆಗಿ ಭರ್ಜರಿ ರೆಸ್ಪಾನ್ಸ್ ಗಳಿಸಿದೆ. ಇನ್ನು ಈ ಚಿತ್ರದ ಸಕ್ಸಸ್ ಕುರಿತು ಮೊದಲಬಾರಿಗೆ ಕಮಲ್ ಹಾಸನ್ ಕನ್ನಡದಲ್ಲಿ ಮಾತನಾಡಿ ಕನ್ನಡಿಗರಿಗೆ ಧನ್ಯವಾಧಗಳನ್ನು ತಿಳಿಸಿದ್ದಾರೆ.
ವಿಕ್ರಮ್ ಸಿನಿಮಾ ಬಿಡುಗಡೆ ಆಗುವ ಮುಂಚೆ ಕಮಲ್ ಹಾಸನ್ ರಾಜ್ಯದಂತ ತಮ್ಮ ಸಿನಿಮಾದ ಪ್ರಮೋಷನ್ ಮಾಡಿದರು. ಇದೇ ಸಂಧರ್ಭದಲ್ಲಿ ಅವರು ಕರ್ನಾಟಕಕ್ಕೂ ಬಂದು ತಮ್ಮ ಸಿನಿಮಾದ ಪ್ರಮೋಷನ್ ಮಾಡಿದ್ದರು. ಆದರೆ ಪ್ರಮೋಷನ್ ವೇಳೆ ಅವರು ಕನ್ನಡಲ್ಲಿ ಮಾತನಾಡಿಲ್ಲ ಎಂಬ ಬೇಸರ ಅಭಿಮಾನಿಗಳ ಮನಸಲ್ಲಿ ಇತ್ತು, ಇದಲ್ಲದೆ ಇವರು ಬಾರಿ ಟೀಕೆಗೆ ಗುರಿಯಾಗಿದ್ದರು. ಆದರೆ ಇದೀಗ ಸಿನಿಮಾ ಸಕ್ಸಸ್ ಬಳಿಕ ಕನ್ನಡದಲ್ಲಿ ಮಾತನಾಡಿ ಕನ್ನಡಿಗರಿಗೆ ಧನ್ಯವಾಧಗಳನ್ನು ಅರ್ಪಿಸಿದ್ದಾರೆ.
Thank you
With love
Kamal Haasan @ikamalhaasan @Dir_Lokesh @Suriya_offl @VijaySethuOffl #FahadhFaasil @anirudhofficial #Mahendran @RKFI @turmericmediaTM @spotifyindia @SonyMusicSouth @SKVFCS @anbariv @girishganges @philoedit @ArtSathees @MrRathna @gopiprasannaa pic.twitter.com/NkaTAzk2uz— Raaj Kamal Films International (@RKFI) June 7, 2022
ಚಿತ್ರದ ಯಶಸ್ಸಿನ ಬಗ್ಗೆ ವಿಡಿಯೋ ಮೂಲಕ ಕನ್ನಡಿಗರಿಗೆ ಧನ್ಯವಾಧ ಹೇಳಿದ ಕಮಲ್ ಹಾಸನ್ “ಕನ್ನಡಿಗರು ಮೊದಲಿನಿಂದಲೂ ಒಳ್ಳೆಯ ಸಿನಿಮಾಗಳನ್ನು ಹಾಗೂ ಒಳ್ಳೆಯ ನಟರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದೇ ರೀತಿ ವಿಕ್ರಮ್ ಸಿನಿಮಾವನ್ನು ಹಾಗೂ ನನ್ನನ್ನು ಬೆಂಬಲಿಸುತ್ತಿರುವುದು ಅತೀವ ಸಂತೋಷ ತಂದುಕೊಟ್ಟಿದೆ” ಎಂದು ಹೇಳಿದ್ದಾರೆ.
ಇದಲ್ಲದೆ ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಧನ್ಯವಾದ ಹೇಳಿರುವ ಕಮಲ್, ಗೆಲುವಿಗೆ ಸಹನಟರ ಪರಿಶ್ರಮ ಮುಖ್ಯ ಕಾರಣ ಎಂದು ನುಡಿದಿದ್ದಾರೆ. ಕೊನೆಯ ಮೂರು ನಿಮಿಷಗಳಲ್ಲಿ ಬೆಳ್ಳಿತೆರೆಯನ್ನೇ ನಡುಗಿಸಿದ ಸೂರ್ಯ ಅವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ತಮ್ಮ ಮೇಲಿನ ಪ್ರೀತಿಗಾಗಿ, ಅವರಿಗೆ ಧನ್ಯವಾದವನ್ನು ಮುಂದಿನ ಸಿನಿಮಾದ ಮೂಲಕ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
