ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ರಸ್ತೆ ನಿರ್ಮಾಣದಲ್ಲಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದೆ. ಕೇವಲ 108 ಗಂಟೆಯಲ್ಲಿ 75 ಕಿಲೋಮೀಟರ್ ಹೆದ್ದಾರಿ ನಿರ್ಮಿಸಿ ಹೊಸ ಅಧ್ಯಾಯ ಬರೆದಿದೆ. ಮಹಾರಾಷ್ಟ್ರದ ಅಮರಾವತಿಯಿಂದ ಅಕೋಲವರೆಗಿನ 75 ಕಿಲೋಮೀಟರ್ ರಸ್ತೆಯನ್ನು ಕೇವಲ 5 ದಿನದಲ್ಲಿ ಮುಗಿಸಲಾಗಿದೆ. ಹಾಗಂತ ಗುಣಮಟ್ಟದಲ್ಲಿ ಯಾವುದೇ ಕೊರತೆಯಾಗಿಲ್ಲ. ಈ ಕುರಿತು ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿರುವ ಸಚಿವ ನಿತಿನ್ ಗಡ್ಕರಿ, NHAI ಸಾಧನೆಗೆ ವಿಶೇಷ ಅಭಿನಂದನೆ ತಿಳಿಸಿದ್ದಾರೆ.
#ConnectingIndia with Prosperity!
Celebrating the rich legacy of our nation with #AzadiKaAmrutMahotsav, under the leadership of Prime Minister Shri @narendramodi Ji @NHAI_Official successfully completed a Guinness World Record (@GWR)… pic.twitter.com/DFGGzfp7Pk
— Nitin Gadkari (@nitin_gadkari) June 7, 2022
ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದು, ಹಗಲು- ರಾತ್ರಿ ಎನ್ನದೇ 720 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡಿದ್ದಾರೆ. ಜೂನ್ 3ರಂದು ಬೆಳಿಗ್ಗೆ 7:27ಕ್ಕೆ ಪ್ರಾರಂಭವಾದ ಈ ಕಾಮಗಾರಿ, ಜೂನ್ 7ರಂದು ಸಂಜೆ 5 ಗಂಟೆಗೆ ಪೂರ್ಣಗೊಂಡಿತು. ಈ 75 ಕಿ.ಮೀ ಏಕಪಥದ ಕಾಂಕ್ರೀಟ್ ರಸ್ತೆಯ ಒಟ್ಟು ಉದ್ದವು 37.5 ಕಿ.ಮೀ ದ್ವಿಪಥದ ಸುಸಜ್ಜಿತ ರಸ್ತೆಗೆ ಸಮನಾಗಿದೆ ಎಂದರು.
ಈ ರಸ್ತೆಯನ್ನು ಖಾಸಗಿ ಗುತ್ತಿಗೆದಾರ ರಜಪೂತ್ ಇನ್ಫ್ರಾಕಾನ್ ನಿರ್ಮಿಸಿದೆ. ಅಮರಾವತಿ-ಅಕೋಲಾ ಹೆದ್ದಾರಿಯ ಕಾಮಗಾರಿ ಶನಿವಾರ ಬೆಳಗ್ಗೆ 6 ಗಂಟೆಗೆ ಆರಂಭವಾಗಿ ಮಂಗಳವಾರ ಪೂರ್ಣಗೊಂಡಿದೆ. NH-53 ಹೆದ್ದಾರಿಯು ಕೋಲ್ಕತ್ತಾ, ರಾಯ್‌ಪುರ, ನಾಗ್ಪುರ, ಅಕೋಲಾ, ಧುಲೆ, ಸೂರತ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
