ಟೀಂ ಇಂಡಿಯಾ ಆಟಗಾರರ ಜೆರ್ಸಿ ಮೇಲೆ ಈ 3 ಸ್ಟಾರ್ ಗಳು ಏಕೆ ಇರುತ್ತವೆ ಗೊತ್ತಾ?
ಪ್ರತಿಯೊಂದು ಕ್ರೀಡೆಯ ಜರ್ಸಿಯ ಮೇಲಿರುವ ಪ್ರತಿಯೊಂದು ಗುರುತು ಕೂಡ ಒಂದೊಂದು ಮಹತ್ವವನ್ನು ಸಾರುತ್ತದೆ. ಹಾಗೆಯೆ ಭಾರತೀಯ ಕ್ರಿಕೆಟ್ ತಂಡದ ಜರ್ಸಿಯ ಟೀಶರ್ಟ್ ಮೇಲಿನ ಬಿಸಿಸಿಐ ಲೋಗೋ ಮೇಲೆ 3 ಸ್ಟಾರ್ ಗಳನ್ನು ನೀವ್ಯಾರಾದರೂ ಗಮನಿಸಿದ್ದೀರಾ.. ಆ ಮೂರು ಸ್ಟಾರ್ ಗಳು ಏನನ್ನು ಹೇಳುತ್ತವೆ ಅಂತ ಮುಂದೆ ಓದಿ ತಿಳ್ಕೊಳಿ.
ಭಾರತೀಯ ಕ್ರಿಕೆಟ್ ತಂಡದ ಜರ್ಸಿಯ ಟೀಶರ್ಟ್ ಮೇಲಿನ ಬಿಸಿಸಿಐ ಲೋಗೋ ಮೇಲೆ 3 ಸ್ಟಾರ್ ಗಳು ಭಾರತ ಕ್ರಿಕೆಟ್ ತಂಡ ಗೆದ್ದ ಮೂರು ವಿಶ್ವಕಪ್ ಗಳನ್ನ ಸೂಚಿಸುತ್ತದೆ. ಭಾರತ ತಂಡ ಏಕದಿನ ಮಾದರಿಯಲ್ಲಿ 2 ಬಾರಿ(1983 ಮತ್ತು 2011) ಹಾಗೂ ಟಿ20(2007) ಮಾದರಿಯಲ್ಲಿ 1 ಬಾರಿ ವಿಶ್ವಕಪ್ ಗೆದ್ದಿದೆ. ಇದರ ಸೂಚಕವಾಗಿ ಟೀಂ ಇಂಡಿಯಾ ಆಟಗಾರರ ಜೆರ್ಸಿಗಳ ಮೇಲೆ ಈ ಮೂರು ಸ್ಟಾರ್ ಗಳನ್ನು ಮುದ್ರಿಸಲಾಗುತ್ತದೆ.
1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು ಮತ್ತು 2011 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದಿತ್ತು. ಇದಕ್ಕೂ ಮೊದಲು 2007 ರಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್ ಅನ್ನು ಧೋನಿ ನಾಯಕತ್ವದಲ್ಲಿ ಭಾರತ ಗೆದ್ದುಕೊಂಡಿತ್ತು. ಮುಂದಿನ ವಿಶ್ವ ಕಪ್ 2019 ರಲ್ಲಿ ನಡೆಯಲಿದೆ ಮತ್ತು ಆ ಟೂರ್ನಿಯಲ್ಲಿ ಗೆದ್ದು ಜರ್ಸಿ ಮೇಲೆ ಮತ್ತೊಂದು ಸ್ಟಾರ್ ಸೇರ್ಪಡೆಗೊಳ್ಳಲಿ ಎಂಬುದೇ ಎಲ್ಲರ ಆಶಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
