ಬಿಹಾರ್ ನಗರದಲ್ಲಿ ಮನಕಲಕುವಂತಹ ಘಟನೆ ನಡೆದಿದೆ. ಬಿಹಾರದ ಸರ್ಕಾರಿ ಆಸ್ಪತ್ರೆಯವರು ಮಗನ ಶವವನ್ನು ನೀಡಬೇಕೆಂದರೆ 50 ಸಾವಿರ ಹಣ ಕೊಡಬೇಕೆಂದು ವೃದ್ಧ ದಂಪತಿಗೆ ಕೇಳಿದ್ದಾರೆ. ವೃದ್ಧ ದಂಪತಿಗಳು ತಮ್ಮ ಬಳಿ ಹಣ ಇಲ್ಲದೆ ಇರುವ ಕಾರಣ ಬೀದಿಗಿಳಿದು ಭಿಕ್ಷೆ ಬೇಡುತ್ತಿದ್ದಾರೆ.
‘ಕೆಲವು ಸಮಯದ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದ. ಈಗ, ನನ್ನ ಮಗನ ಶವ ಸಮಷ್ಟಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿತು. ಶವವನ್ನು ನೀಡಲು ಆಸ್ಪತ್ರೆಯವರು ₹50 ಸಾವಿರ ಕೇಳಿದ್ದಾರೆ. ನಾವು ಬಡವರು, ಅಷ್ಟು ಹಣ ಕೊಡಲು ಹೇಗೆ ಸಾಧ್ಯ?‘ ಎಂದು ಮಹೇಶ್ ಠಾಕೂರ್ ಖಾಸಗಿ ಸುದ್ದಿ ಮಾಧ್ಯಮದ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಮ್ಮ ಮಗನ ಶವವನ್ನು ಪಡೆಯಲು ಈ ವೃದ್ಧ ದಂಪತಿ ಭಿಕ್ಷೆ ಬೇಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಆಸ್ಪತ್ರೆಯಲ್ಲಿನ ಬಹುತೇಕ ಆರೋಗ್ಯ ಕಾರ್ಯಕರ್ತರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಕ್ಕಿಲ್ಲ. ರೋಗಿಗಳ ಸಂಬಂಧಿಕರಿಂದ ಸಿಬ್ಬಂದಿ ಹಣ ಪಡೆದಿರುವ ಹಲವಾರು ನಿದರ್ಶನಗಳಿವೆ ಎಂದು ಸುದ್ದಿ ಸಂಸ್ಥೆ ಕೂಡ ವರದಿ ಮಾಡಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
