fbpx
ಸಮಾಚಾರ

ಭಾರತ ಮಹಿಳಾ ಕ್ರಿಕೆಟ್ ಬದುಕಿಗೆ ನಿವೃತಿ ಘೋಷಿಸಿದ ಮಿಥಾಲಿ ರಾಜ್ ಅವರ ಸಾಧನೆಗಳು!

ಮಹಿಳಾ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರು ತಮ್ಮ 23 ವರ್ಷದ ಕ್ರಿಕೆಟ್ ವೃತಿ ಬದುಕಿಗೆ ಹಠಾತ್ ನಿವೃತ್ತಿ ಘೋಷಿಸಿದರು. ಇದು ಇವರ ಅಪಾರ ಅಭಿಮಾನಿಗಳಿಗೆ ಇದು ಬಹಳಷ್ಟು ಬೇಸರವನ್ನು ತಂದುಕೊಟ್ಟಿತ್ತು.

2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ T-20 ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು. ಇದಾದ ಬಳಿಕ ಏಕದಿನ ತಂಡದ ನಾಯಕಿಯಾಗಿ ಎರಡು ಬಾರಿ ತಂಡವನ್ನು ವಿಶ್ವಕಪ್ ಫೈನಲ್ ವರೆಗೂ ಕೊಂಡೊಯ್ದರು. ಆದರೆ ತಂಡದ ನೀರಸ ಪ್ರದರ್ಶನದಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದು ಅವರ ಮನಸಿನ ಮೇಲೆ ಬಹಳ ಗಂಭೀರವಾದ ಪರಿಣಾಮವನ್ನು ಸಹ ಬೀರಿತ್ತು. ಇದೆಲ್ಲದರ ನಡುವೆ ಮಿಥಾಲಿ ರಾಜ್ ತಮ್ಮ ಹೆಸರಿನಲ್ಲಿ ಹಲವಾರು ಧಾಖಲೆಗಳನ್ನು ಬರೆದಿದ್ದಾರೆ. ಇವರ ಹೆಸರಿನಲ್ಲಿ ಮೂಡಿ ಬಂದಿರುವ ಧಾಖಲೆಗಳ ಪಟ್ಟಿ ಇಲ್ಲಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯವಾಡಿದ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮಿಥಾಲಿ ರಾಜ್ ಅವರ ಹೆಸರಿನಲ್ಲಿದೆ. 1999ರಲ್ಲಿ ಅವರು ಐರ್ಲೆಂಡ್‌ ಎದುರು ಒಡಿಐ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾಗ ಅವರ ವಯಸ್ಸು ಕೇವಲ 16 ವರ್ಷವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಇವರು 232 ಒಡಿಐ ಪಂದ್ಯಗಳನ್ನು ಆಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಂತೆ ಮಿಥಾಲಿ ಕೂಡ 6 ವಿಶ್ವಕಪ್‌ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪರ ಬ್ಯಾಟ್‌ ಬೀಸಿದ್ದಾರೆ. ಎರಡು ಬಾರಿ ಭಾರತ ತಂಡವನ್ನು ಫೈನಲ್‌ ವರೆಗೂ ಕರೆದುಕೊಂಡು ಹೋಗಿದ್ದಾರೆ. ಆದರೆ ಪ್ರಶಸ್ತಿ ಗೆಲ್ಲಿಸಲು ವಿಫಲರಾದರು. 1999ರಿಂದ 2022ರವರೆಗೆ ನಡೆದ ಎಲ್ಲ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ಮಿಥಾಲಿ ರಾಜ್‌ ಆಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top