ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಆರಂಕ್ಕೆ ಇನ್ನು ಕೆಲವೇ ಗಂಟೆಗಳು ಮಾತ್ರವೇ ಬಾಕಿ ಇರುವಾಗ ಟೀಮ್ ಇಂಡಿಯಾಗೆ ಭಾರಿ ಆಘಾತ ಎದುರಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ಕೆ.ಎಲ್ ರಾಹುಲ್ ಗಾಯಗೊಂಡಿದ್ದು, ಟಿ20 ಸರಣಿಯಿಂದ ಸಂಪೂರ್ಣ ಹೊರಗುಳಿಯುವಂತ್ತಾಗಿದೆ.
NEWS 🚨- KL Rahul and Kuldeep Yadav ruled out of #INDvSA series owing to injury.
The All-India Senior Selection Committee has named wicket-keeper Rishabh Pant as Captain and Hardik Pandya as vice-captain for the home series against South Africa @Paytm #INDvSA
— BCCI (@BCCI) June 8, 2022
ಹೀಗೆ ಕೆಎಲ್ ರಾಹುಲ್ ಟೂರ್ನಿಯಿಂದ ಹೊರಬಿದ್ದ ಕಾರಣ ಬಿಸಿಸಿಐ ಬದಲಿ ನಾಯಕ ಮತ್ತು ಉಪನಾಯಕರನ್ನು ನೇಮಿಸಿದ್ದು, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಗೆ ಬಯಸದೇ ಬಂದ ಭಾಗ್ಯ ದೊರೆತಂತಾಗಿದೆ. ಕೆಎಲ್ ರಾಹುಲ್ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಬಿಸಿಸಿಐ ನಾಯಕತ್ವದ ಜವಾಬ್ದಾರಿಯನ್ನು ಸರಣಿಗೆ ಈ ಹಿಂದೆ ಉಪನಾಯಕನಾಗಿ ಆಯ್ಕೆಯಾಗಿದ್ದ ರಿಷಭ್ ಪಂತ್ ಹೆಗಲಿದೆ ಹಾಕಿದೆ ಹಾಗೂ ಉಪನಾಯಕನ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ.
ಇಂದು (ಜೂನ್ 09) ದೆಹಲಿಯಲ್ಲಿ ಸರಣಿಯ ಮೊದಲ ಟಿ 20 ಪಂದ್ಯ ನಡೆಯಲಿದೆ. 12 ರಂದು ಕಟಕ್ ನಲ್ಲಿ 2 ನೇ ಪಂದ್ಯ, 14 ವಿಶಾಖಪಟ್ಟಣಂ ನಲ್ಲಿ ಮೂರನೇ ಪಂದ್ಯ, 17 ರಂದು ರಾಜಕೋಟ್ ನಲ್ಲಿ ನಾಲ್ಕನೇ ಪಂದ್ಯ ಮತ್ತು 19 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
