ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ, ಪ್ರಸ್ತುತ IPL ನ ಆರೆಂಜ್ ಕಾಪ್ ವಿನ್ನರ್ ಆದಂತ ಜೋಸ್ ಬಟ್ಲರ್ ನಮ್ಮ ಕನ್ನಡದ ಬದ್ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಒಂದು ವಿಶೇಷವಾದ ಉಡುಗೊರೆಯನ್ನು ನೀಡಿದ್ದು ಇದನ್ನು ಕಿಚ್ಚ ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಅಷ್ಟಕ್ಕೂ ಬಟ್ಲರ್ ಕಿಚ್ಚನಿಗೆ ನೀಡಿದ ಉಡುಗೊರೆ ಯಾವುದು ಗೊತ್ತಾ?
2022 ರ ಐಪಿಎಲ್ ನಲ್ಲಿ ಬಟ್ಲರ್ ಬ್ಯಾಟ್ ಸಕತ್ ಸೌಂಡ್ ಮಾಡಿತ್ತು. ಇದೀಗ ಇವರು ಉಪಯೋಗಿಸಿದ ಬ್ಯಾಟಿನ ಮೇಲೆ ಅವರ ಸಹಿ ಹಾಕಿ ಕಿಚ್ಚ ಸುದೀಪ್ ಅವರಿಗೆ ನೀಡಿದ್ದಾರೆ. ರಾಜಸ್ತಾನ ರಾಯಲ್ಸ್ ಪರ ಆಡಿದ್ದ ಕರ್ನಾಟಕ ಮೂಲದ ಕೆಸಿ ಕರಿಯಪ್ಪ ಅವರು ಬಟ್ಲರ್ ಅವರ ಉಡುಗೊರೆಯನ್ನು ಸುದೀಪ್ ಗೆ ತಲುಪಿಸಿದ್ದಾರೆ
ಈ ವಿಶೇಷ ಗಿಫ್ಟ್ ಅನ್ನು ಸ್ವೀಕರಿಸಿದ ಕಿಚ್ಚ ಟ್ವಿಟ್ಟರ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.. ವಿಡಿಯೋ ಮೂಲಕ ಧನ್ಯವಾದವನ್ನು ತಿಳಿಸಿರುವ ಸುದೀಪ್ “ನಿಜಕ್ಕೂ ನನಗೆ ಬಹಳ ಅಚ್ಚರಿಯಾಯಿತು. ನಾನು ಇದನ್ನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಮೊದಲಿಗೆ ನಾನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಇದನ್ನು ಸಾಧ್ಯವಾಗಿಸಿದ ನನ್ನ ಸ್ನೇಹಿತ ಕೆಸಿ ಕಾರ್ಯಪ್ಪಗೂ ಥ್ಯಾಂಕ್ಸ್ ಹೇಳುತ್ತೇನೆ. ವಿಶೇಷವಾಗಿ ಜೋಸ್ ಬಟ್ಲರ್ ಸಲುವಾಗಿ ಈ ವೀಡಿಯೋ ಮಾಡಿದ್ದೇನೆ. ವೈಯಕ್ತಿಕವಾಗಿ ನೀವು ಸಹಿ ಮಾಡಿದಂಥ ಬ್ಯಾಟ್ ಅನ್ನು ನನಗೆ ನೀಡಿದ್ದಕ್ಕೆ ಬಹಳ ಧನ್ಯವಾದ. ಇದನ್ನು ನಾನು ಸ್ವೀಕರಿಸಿದ್ದೇನೆ. ನನಗೆ ಬಹಳ ಸಂತೋಷವಾಗಿದೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
A big hug to this sweet surprise and a sweetest gesture.
Thank you @josbuttler@rajasthanroyals @cariappa14
🥂🥳❤️ pic.twitter.com/EyXOqyJQY0— Kichcha Sudeepa (@KicchaSudeep) June 9, 2022
ಅಂದಹಾಗೆ ಕ್ರಿಕೆಟ್ ಗೂ ಕಿಚ್ಚನಿಗೂ ಅವಿನಾಭಾವ ಸಂಭಂದ ಇದೆ ಎಂದರೆ ತಪ್ಪಾಗುವುದಿಲ್ಲ. ಸುದೀಪ್ ನಟನೆಯಷ್ಟೇ ಅಲ್ಲ, ಕ್ರಿಕೆಟ್’ನಲ್ಲೂ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸೆಲಬ್ರಿಟಿ ಕ್ರಿಕೆಟ್ ಲೀಗ್ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್’ಮ್ಯಾನ್ ಆಗಿ ಕಿಚ್ಚ ಸುದೀಪ್ ಸಾಕಷ್ಟು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಕೆಸಿಸಿ ಎಂಬ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ಸನ್ನು ಕೂಡ ಕಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
