ನಾವು ಚಿತ್ರ ವಿಚಿತ್ರವಾದ ಕಳ್ಳತನ ಬಗ್ಗೆ ಕೇಳಿದ್ದೀವಿ. ಕಳ್ಳರು ಎಷ್ಟು ಖತರ್ನಾಕ್ ಆಗಿ ಕೆಲಸ ಮಾಡುತ್ತಾರೆ ಎಂಬುದು ನಮಗೆಲ್ಲಾ ಗೊತ್ತು. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಚಲಿಸುತ್ತಿರುವ ರೈಲಿನಲ್ಲಿ ಸ್ಪೈಡರ್ ಮ್ಯಾನ್ ತರ ಬಂದು ಮೊಬೈಲ್ ಕದ್ದುಕೊಂಡು ಹೋಗಿದ್ದಾನೆ.
ನಮಗೆಲ್ಲರಿಗೂ ಸ್ಪೈಡರ್ ಮ್ಯಾನ್ ಕಥೆ ಗೊತ್ತು ಅಲ್ವ. ಕಟ್ಟಡ ದಿಂದ ಕಟ್ಟಡಕ್ಕೆ ಹಾರಿ ಜನರನ್ನು ರಕ್ಷಿಸುತ್ತಾನೆ. ಆದರೆ ಇಲ್ಲೊಬ್ಬ ಕಳ್ಳ ಇದೆ ಸ್ಪೈಡರ್ ಮ್ಯಾನ್ ಶೈಲಿಯಲ್ಲಿ ಮೊಬೈಲ್ ಕದ್ದಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದೆ.
ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ಬಿಹಾರದ ನದಿಯ ಮೇಲಿನ ಸೇತುವೆಯ ಮೇಲೆ ಇಬ್ಬರು ರೈಲಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಪ್ರಯಾಣಿಕರು ನದಿಯ ವಿಡಿಯೋ ಚಿತ್ರೀಕರಿಸುತ್ತಿರುತ್ತಾರೆ. ಹೀಗೇ ಮುಂದಕ್ಕೆ ರೈಲು ಚಲಿಸುತ್ತಿದ್ದಂತೆ ಸೇತುವೆ ಕಂಬವನ್ನು ಹಿಡಿದು ನೇತಾಡಿಕೊಂಡಿದ್ದ ಕಳ್ಳ ವಿಡಿಯೋ ಚಿತ್ರೀಕರಿಸುತ್ತಿದ್ದ ಮೊಬೈಲ್ ಅನ್ನು ಕಸಿದುಕೊಂಡಿದ್ದಾನೆ. ಕಳ್ಳನ ಕೈಚಳಕಕ್ಕೆ ಗಮನಿಸಿದ ಪ್ರಯಾಣಿಕರು ಒಂದು ಕ್ಷಣ ಆಶ್ಚರ್ಯಚಕಿತರಾಗುತ್ತಾರೆ.
पलक झपकते हुई लूट का Live वीडियो.
इस वीडियो को पहली बार देखकर आप समझ ही नहीं पाएँगे कि क्या हुआ, इसलिए वीडियो को स्लो मोशन में भी किया है ताकि आप चलती ट्रेन में अक्सर होने वाली वारदात देख सकें और सतर्क हो जाएँ. बिहार के बेगूसराय की घटना. pic.twitter.com/1K2H0DTj1Y
— Utkarsh Singh (@UtkarshSingh_) June 8, 2022
ಮೊಬೈಲ್ ಕಳೆದುಕೊಂಡ ವ್ಯಕ್ತಿಯ ಹೆಸರು ಮೊಹಮ್ಮದ್ ಸಮೀರ್. ಈ ಘಟನೆ ನಡೆದಿದ್ದು ಜೂನ್ 4 ರಂದು ಆದರೆ ತಡವಾಗಿ ಬೆಳಕಿಗೆ ಬಂದಿದೆ. ಮೊಬೈಲ್ಕ ಕಳೆದುಕೊಂಡಿರುವ ಬಗ್ಗೆ ದೂರು ಧಾಖಲಿಸಿಕೊಂಡಿರುವ ಪೊಲೀಸರು ತಿಹಾರ್-ಬರೌನಿ ರೈಲು ಮಾರ್ಗದಲ್ಲಿ ಇದೇ ರೀತಿಯ ದರೋಡೆಗಳ ಸರಣಿಯನ್ನು ‘ಝಪ್ತಾ ಗ್ಯಾಂಗ್’ ಎಂದು ಪೊಲೀಸರು ವರದಿ ಮಾಡಿದ್ದಾರೆ.
ಇನ್ನು ಈ ಘಟನೆಯ ಕುರಿತು ಮಾತನಾಡಿದ ಕತಿಹಾರ್ ರೈಲ್ವೆ ಎಸ್ಪಿ ಡಾ.ಸಂಜಯ್ ಭಾರ್ತಿ, “ಯಾರಾದರು ಮೊಬೈಲ್ನಲ್ಲಿ ಮಾತನಾಡುತ್ತಿದ್ದರೆ ಕಳ್ಳರು ದೊಣ್ಣೆಯಿಂದ ಹೊಡೆದು ಮೊಬೈಲ್ ಅನ್ನು ಬೀಳಿಸುತ್ತಾರೆ. ನಂತರ ಅದನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಅಲ್ಲದೆ ಆ ಪ್ರದೇಶದಲ್ಲಿ ಈಗಾಗಲೇ ಪೊಲೀಸರು ಬೀಡುಬಿಟ್ಟಿದ್ದಾರೆ. ಇಂತಹ ಪ್ರಕರಣಗಳಲ್ಲಿ ಅನೇಕರು ಜೈಲಿಗೆ ಹೋಗಿದ್ದಾರೆ. ಈ ವಿಚಾರದಲ್ಲಿ ಹೆಚ್ಚಿನ ಜನರನ್ನು ಗುರುತಿಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
