ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮೊದಲ T-20 ಪಂದ್ಯ ಬಹಳ ರೋಚಕತೆ ಇಂದ ಕೂಡಿದ್ದು ಎರಡು ತಂಡಗಳು ಸಕತ್ ಫೈಟ್ ಕೊಟ್ಟಿದ್ದವು. ಇವೆಲ್ಲದರ ಮದ್ಯೆ ಪಂದ್ಯ ವೀಕ್ಷಣೆಗೆ ಬಂದ ಕ್ರಿಕೆಟ್ ಪ್ರೇಮಿಗಳ ಮಧ್ಯೆ ಕೂಡ ಫೈಟ್ ನಡೆದಿದ್ದು ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
Exclusive video from #QilaKotla yesterday East Stand pic.twitter.com/CXgWMOse87
— Pandit Jofra Archer (@Punn_dit) June 10, 2022
ಪಂದ್ಯ ನಡೆಯುತ್ತಿರುವ ವೇಳೆ ವೀಕ್ಷಣೆಗೆ ಬಂದ ಅಭಿಮಾನಿಗಳ ಮಧ್ಯೆ ದೊಡ್ಡ ಕಾಳಗವೇ ಸೃಷ್ಟಿಯಾಗಿತ್ತು. ಮೈದಾನದ ಈಸ್ಟ್ ಸ್ಟ್ಯಾಂಡ್ನಲ್ಲಿ ಆಟ ವೀಕ್ಷಿಸಲು ಬಂದ ಕೆಲವು ಪ್ರೇಕ್ಷಕರು ಮುಖಾಮುಖಿ ಬಡಿದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬರ ಮೇಲೊಬ್ಬರು ಬಿದ್ದು ಮುಖ ಮೂತಿ ನೋಡದೆ ಹೊಡೆದಾಡುತ್ತಿದ್ದರು. ನಂತರ ಭದ್ರತಾ ಸಿಬ್ಬಂದಿ ಬಂದು ಇವರನ್ನು ತಡೆದರು. ಇಲ್ಲದಿದ್ದರೆ ದೊಡ್ಡ ಗಲಾಟೆ ಆಗೋದ್ರಲ್ಲಿ ಯಾವುದೇ ಅನುಮಾನ ವಿರಲಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಇಶಾನ್ ಕಿಶನ್ ಅವರ ಅಮೋಘ ಅರ್ಧ ಶತಕದದ ನೆರವಿನಿಂದ 211 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಆದರೆ ಭಾರತ ತಂಡದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಪಂದ್ಯವನ್ನು ಸೋತಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
