ಖ್ಯಾತ ಚಿತ್ರ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ತಾವು ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಮತ್ತು ತಾಯಿ ಇಬ್ಬರು ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪೊರ್ಕಿ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಇವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. 2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣಿತಾ ಹಸೆಮಣೆ ಏರಿದರು. ಇಬ್ಬರು ಒಬ್ಬನೊಬ್ಬರು ಪ್ರೀತಿಸುತ್ತಿದ್ದ ಕಾರಣ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕೆಲವು ತಿಂಗಳುಗಳ ಹಿಂದೆ ತಾವು ಮಗುವಿನ ನಿರೀಕ್ಷೆಯಲ್ಲಿರುವುದರ ಬಗ್ಗೆ ಪ್ರಣಿತಾ ತಿಳಿಸಿಕೊಟ್ಟಿದ್ದರು. ಇದೀಗ ಇವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
The last few days have been surreal. Ever since our baby girl arrived.. 🧿❤️ pic.twitter.com/kKWsTU8gqW
— Pranitha Subhash (@pranitasubhash) June 10, 2022
‘ನನ್ನ ತಾಯಿ ಸ್ತ್ರೀರೋಗ ತಜ್ಞೆ. ಹೀಗಾಗಿ, ಈ ವಿಚಾರದಲ್ಲಿ ನಾನು ಬಹಳ ಅದೃಷ್ಟವಂತೆ. ಹಾಗಾಗಿ ನನ್ನ ಡೆಲಿವರಿ ಯಾವುದೇ ಒತ್ತಡವಿಲ್ಲದೆ ಸರಾಗವಾಗಿ ಆಯಿತು. ಆದರೆ ನನ್ನ ತಾಯಿ ಪಾಲಿಗೆ ಇದು ಬಹಳ ಕಠಿಣ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ನನ್ನ ಕಠಿಣ ಕ್ಷಣದಲ್ಲಿ ಸಾಥ್ ನೀಡಿದ ಪ್ರತಿಯೊಬ್ಬ ವೈದ್ಯರಿಗೂ ಧನ್ಯವಾದಗಳು’ ಎಂದು ಪ್ರಣಿತಾ ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
