ಚಂದನವನದ ಕ್ಯೂಟ್ ಮತ್ತು ಗೋಲ್ದನ್ ಕ್ವೀನ್ ಎಂದೇ ಪ್ರಖ್ಯಾತರಾಗಿರುವ ಅಮೂಲ್ಯ ಅವರು ಇತ್ತೀಚಿಗೆ ಮುದ್ದಾದ ಅವಳಿ ಜವಳಿ ಮಗುವಿಗೆ ಜನುಮ ನೀಡಿದ್ದರು. ಮಗುವಿಗೆ ಜನುಮ ನೀಡಿದ ಬಳಿಕ ಇಲ್ಲಿಯವರೆಗೂ ಎಂದಿಗೂ ತಮ್ಮ ಮಗುವಿನ ಫೋಟೋ ಹಂಚಿಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಆದರೂ ಇದು ಅಭಿಮಾನಿಗಳಿಗೆ ತುಂಬಾ ಬೇಸರ ತಂದಿದೆ ಏಕೆ ಗೊತ್ತಾ?
ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಇವರು ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು. ಒಂದರ ಮೇಲಂತೆ ಒಂದು ಸಿನಿಮಾಗಳು ಇವರಿಗೆ ಬರಲು ಶುರುವಾಗಿದ್ದವು. ಇಷ್ಟೊಂದು ಡಿಮ್ಯಾಂಡ್ ಇರುವಾಗಲೇ 2017ರಲ್ಲಿ ಜಗದೀಶ್ ಆರ್. ಚಂದ್ರ ಜೊತೆ ಹಸೆಮಣೆ ಏರಿದ್ದರು. ನಂತರ ಸಂಸಾರ ಅಂತ ಬ್ಯುಸಿ ಆದರು. ಈ ವೇಳೆ ಮಾರ್ಚಿನಲ್ಲಿ ಮುದ್ದಾದ ಅವಳಿ ಮಕ್ಕಳಿಗೆ ಜನುಮ ನೀಡಿದ್ದರು. ಆದರೆ ಇಲ್ಲಿಯವರೆಗೂ ತಮ್ಮ ಮಕ್ಕಳ ಚಿತ್ರವನ್ನು ಹಂಚಿಕೊಂಡಿರದ ಅಮೂಲ್ಯ ಮೊದಲ ಬಾರಿಗೆ ತಮ್ಮ ಮಕ್ಕಳ ಮುದ್ದಾದ ಕಾಲುಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆದರೆ ಇದು ಅಭಿಮಾನಿಗಳಿಗೆ ತುಂಬಾ ಬೇಸರವನ್ನು ಉಂಟುಮಾಡಿದೆ.
View this post on Instagram
ಏಕೆಂದರೆ ಅಮೂಲ್ಯ ಅವರು ಹಂಚಿಕೊಂಡಿರುವ ಫೋಟೋದಲ್ಲಿ ತಮ್ಮ ಮಕ್ಕಳ ಮುದ್ದಾದ ಕಾಲುಗಳನ್ನು ಅವರ ಕೆನ್ನೆಯ ಮೇಲೆ ಇಟ್ಟುಕೊಂಡು ಮುದ್ದಿಸಿರುತ್ತಾರೆ. ಆದರೆ ಇದರಲ್ಲಿ ಅವರ ಮಕ್ಕಳ ಮುದ್ದಾದ ಫೋಟೋವನ್ನು ಶೇರ್ ಮಾಡಿದರೆ ಅಭಿಮಾನಿಗಳಿಗೆ ಖುಷಿ ಆಗುತ್ತಿತ್ತು ಎಂಬುದು ಅಭಿಮಾನಿಗಳ ಅಸೆ ಆಗಿತ್ತು. ಅಮೂಲ್ಯ ಅವರು ಶೇರ್ ಮಾಡಿರೋ ಫೋಟೋಗಳಿಗೆ ಜನರು ತಮ್ಮ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
