ಪ್ರಪಂಚದಲ್ಲಿ ಚಿತ್ರ ವಿಚಿತ್ರವಾದ ಘಟನೆಗಳು ನಡೆಯುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಕೆಲವೊಂದು ಕಾನೂನುಗಳು ನಮ್ಮನ್ನು ಒಂದು ಕ್ಷಣ ಆಶ್ಚರ್ಯಚಕಿತರನ್ನಾಗಿ ಮಾಡುವುದು ಸಹಜ. ಆದರೆ ಕೆಲವೊಂದು ದೇಶಗಳಲ್ಲಿ ಇರುವ ಕಾನೂನುಗಳನ್ನು ಕೇಳಿದರೆ ನಿಮ್ಮ ಮುಖದಲ್ಲಿ ನಗು ಮೂಡುವುದು ಸಹಜ. ಯಾವಯಾವ ದೇಶಗಳಲ್ಲಿ ಈ ರೀತಿಯ ವಿಚಿತ್ರ ಕಾನೂನುಗಳಿವೆ ಎಂಬುದರ ವಿವರ ಇಲ್ಲಿದೆ.
ಹಾಂಗ್ ಕಾಂಗ್‌ನಲ್ಲಿ ಪತಿ ತನ್ನ ಹೆಂಡತಿಗೆ ಮೋಸ ಮಾಡಿದರೆ ಪತಿಯನ್ನು ಹೆಂಡತಿ ಕೊಂದರೆ ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ. ಆದರೆ ಅವಳು ತನ್ನ ಕೈಯಿಂದಲೇ ತನ್ನ ಗಂಡನನ್ನು ಕೊಲ್ಲಲು ಬಯಸದಿದ್ದರೆ ಶಿಕ್ಷೆಯನ್ನು ಬೇರೆ ರೀತಿಯಲ್ಲಿ ನೀಡುವ ಅವಕಾಶ ಇದೆ.
ಸ್ವಿಟ್ಜರ್ಲೆಂಡ್‌ನಲ್ಲಿ ರಾತ್ರಿ 10 ಗಂಟೆಯ ನಂತರ ಸ್ನಾನಗೃಹದಲ್ಲಿ ಫ್ಲಶ್ ಮಾಡಿದರೆ ಅಥವಾ ಬಾತ್ರೂಮ್ನಿಂದ ಯಾವುದೇ ಶಬ್ದ ಬಂದರೆ ಅಂಥವರಿಗೆ ದಂಡ ವಿಧಿಸಲಾಗುತ್ತದೆ.
ಇಂಗ್ಲೆಂಡ್ನ ಮಸಾಚುಸೆಟ್ಸ್ನಲ್ಲಿ ಸ್ನಾನ ಮಾಡದೆ ಮಲಗುವುದು ಕಾನೂನು ಬಾಹಿರವಾಗಿದೆ. ಸ್ನಾನ ಮಾಡದೆ ಮಲಗಿದರೆ ಜೈಲು ಶಿಕ್ಷೆಗೆ ಒಳಗಾಗುತ್ತಾನೆ.
ಯುನೈಟೆಡ್ ಸ್ಟೇಟ್ಸ್‌ನ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕಾರನ್ನು ಒಳ ಉಡುಪುಗಳಿಂದ ಸ್ವಚ್ಛಗೊಳಿಸಿದರೆ ಅಂತವರಿಗೆ ದಂಡವನ್ನು ವಿಧಿಸಲಾಗುತ್ತದೆ.
ಇಟಲಿಯ ಮಿಲಾನ್‌ನಲ್ಲಿ ಮುಕ್ತವಾಗಿ ತಿರುಗಾಡುವ ಪ್ರತಿಯೊಬ್ಬ ನಾಗರಿಕನು ಯಾವಾಗಲೂ ನಗುತ್ತಿರುವಂತೆ ಕಾಣಬೇಕು. ಅವರ ಮುಖದಲ್ಲಿ ನಗು ಕಾಣದಿದ್ದರೆ ತಕ್ಷಣವೇ ಅವರನ್ನು ಅಪರಾಧಿ ಎಂದು ಪರಿಗಣಿಸಿ ನೂರು ಡಾಲರ್ವರೆಗೆ ದಂಡ ವಿಧಿಸಲಾಗುತ್ತದೆ.
ಸಿಂಗಾಪುರದಲ್ಲಿ ಚ್ಯೂಯಿಂಗ್ ಗಮ್ ಮಾರಾಟ ಮತ್ತು ತಯಾರಿಕೆಯು ಅಪರಾಧವಾಗಿದೆ. ಆದರೆ 2004 ರಲ್ಲಿ ವೈದ್ಯರ ಸಲಹೆಯ ಮೇರೆಗೆ ಸರ್ಕಾರವು ಬಾಯಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಕಾನೂನಿಂದ ವಿನಾಯಿತಿ ನೀಡಲಾಗಿದೆ.
ಜರ್ಮನಿಯ ಆಟೋಬಾನ್ ರಸ್ತೆಗಳಲ್ಲಿ ವಾಹನವನ್ನು ಎಷ್ಟು ವೇಗವಾಗಿ ಬೇಕಾದರೂ ಓಡಿಸಬಹುದು, ಆದರೆ ಕಾರಿನಲ್ಲಿ ಸಾಕಷ್ಟು ತೈಲ ಇರುವುದು ಅಷ್ಟೇ ಅವಶ್ಯ. ಒಂದೊಮ್ಮೆ ಕಾರು ರಸ್ತೆಯಲ್ಲಿ ನಿಂತರೆ ದಂಡವನ್ನು ಪಾವತಿಸಬೇಕಾಗುತ್ತದೆ.
ಇಟಲಿಯ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದು ಅಪರಾಧ. ಯಾರಾದರೂ ಪಾರಿವಾಳಗಳಿಗೆ ಆಹಾರ ಹಾಕುವುದು ಕಂಡುಬಂದರೆ ಅವರನ್ನು ಕೂಡಲೇ ಬಂಧಿಸಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
