ಯು ಟ್ಯೂಬ್ ಅಲ್ಲಿ ಸದಾ ಆಕ್ಟಿವ್ ಇರುವವರಿಗೆ ಡಾ ಬ್ರೋ ಎನ್ನುವ ಹೆಸರು ನೆನಪಿರುತ್ತದೆ. ಈತ ಒಬ್ಬ ಫೇಮಸ್ ಯು ಟ್ಯುಬರ್. ಚಿಕ್ಕ ವಯಸಿನಲ್ಲಿ ಬಹಳ ಎತ್ತರದ ಸಾಧನೆ ಮಾಡಿದ್ದಾನೆ. ಈತ ಇಷ್ಟೊಂದು ಸಾಧನೆ ಮಾಡಲು ಮುಖ್ಯ ಕಾರಣ ಯು ಟ್ಯೂಬ್. ಈತ ಯು ಟ್ಯೂಬ್ ಇಂದ ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾನೆ ಗೊತ್ತಾ? ತಿಂಗಳಿಗೆ ಎಷ್ಟು ದುಡ್ಡು ಸಂಪಾದಿಸುತ್ತಾನೆ? ಹೀಗೆ ಈತನ ಬಗ್ಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಡಾ ಬ್ರೋ ಎಂದೇ ಪ್ರಖ್ಯಾತಿ ಗಳಿಸಿರುವ ಈತನ ನಿಜವಾದ ಹೆಸರು ಗಗನ್ ಎಂದು. ಈತ ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವನು. ಬ್ರಾಹ್ಮಣ ಸಂಪ್ರದಾಯದಲ್ಲಿ ಹುಟ್ಟಿರುವ ಕಾರಣ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ. ಈತನಿಗೆ ಓದಿಗಿಂತ ಇತರೆ ಚಟುವಟಿಕೆಗಳಾದ ಹಾಡು, ಡ್ಯಾನ್ಸ್ ನಿರೂಪಣೆ ಇವುಗಳಲ್ಲಿ ಹೆಚ್ಚಾಗಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ.
ಹೀಗಾಗಿ 2016 ರಲ್ಲಿ ತನ್ನದೇ ಆದ ಒಂದು ಯು ಟ್ಯೂಬ್ ಚಾನೆಲ್ ಒಂದರನ್ನು ಶುರುಮಾಡಿದ. ಇದಕ್ಕೆ ಡಿ ಆರ್ ಬ್ರೋ ಎಂದು ಹೆಸರು ಇಟ್ಟಿದ್ದ. ಮುಂದೆ ಇದು ಡಾ ಬ್ರೋ ಎಂದೇ ಪ್ರಖ್ಯಾತಿ ಗಳಿಸಿತು. ಮೊದಲು ಇದರಲ್ಲಿ ಕೇವಲ ಕಾಮಿಡಿ ವಿಡಿಯೋಗಳನ್ನು ಮಾತ್ರ ಅಪ್ಲೋಡ್ ಮಾಡುತ್ತಿದ್ದ. ನಂತರ ಇದರಲ್ಲಿ ನಿಮಾ ನಟ ನಟಿಯರ ಇಂಟರ್ವ್ಯೂ, ತಾನು ಸುತ್ತಾಡಿದ ಬೇರೆ ಬೇರೆ ರಾಜ್ಯಗಳ, ದೇಶಗಳ ವಿವರಗಳನ್ನು ಅಪ್ಲೋಡ್ ಮಾಡಲು ಶುರು ಮಾಡಿದ.
ತಿಂಗಳ ಆದಾಯ ಎಷ್ಟು?
ಇಷ್ಟೆಲ್ಲಾ ಪ್ರೇಕತಿ ಗಳಿಸಿದ ಈತ ತಿಂಗಳಿಗೆ ಕೇವಲ ಯು ಟ್ಯೂಬ್ ಒಂದರಿಂದ ಎಷ್ಟು ಆದಾಯ ಗಳಿಸುತ್ತಾನೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟೋದು ಸಹಜ. ಸದ್ಯದ ಮಾಹಿತಿಯ ಪ್ರಕಾರ ಈತ ತಿಂಗಳಿಗೆ ಸುಮಾರು 800 ಡಾಲರ್ ಅಂತರ ಸರಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಕುರಿತು ಅಧಿಕೃತ ಮಾಹಿತಿ ಇಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
