ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಟ್ರಿನಿಟಿ ಸರ್ಕಲ್ನ ಪ್ರತಿಷ್ಠಿತ 5 ಸ್ಟಾರ್ ದಿ ಪಾರ್ಕ್ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಸೇರಿ ಐವರನ್ನು ಬಂಧಿಸಿದ್ದರು. ಆದರೆ ಇದೀಗ ಸಿದ್ಧಾಂತ್ ಕಪೂರ್ ಮತ್ತು ಇನ್ನಿತರ 5 ಜನರಿಗೆ ಜಾಮೀನು ಮಂಜೂರಾಗಿದ್ದು ಇವರನ್ನು ಸೋಮವಾರ ರಾತ್ರಿ ಬಿಡುಗಡೆಮಾಡಲಾಗಿದೆ. ಆದರೆ ಇಂದು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿದ್ದಾರೆ.
ಏನಿದು ಪ್ರಕರಣ?
ಎಂ.ಜಿ ರಸ್ತೆ ಬಳಿಯ ಟ್ರಿನಿಟಿ ಸರ್ಕಲ್ನ ಪ್ರತಿಷ್ಠಿತ 5 ಸ್ಟಾರ್ ದಿ ಪಾರ್ಕ್ ಹೋಟೆಲ್ ಮೇಲೆ ಹಲಸೂರು ಪೊಲೀಸರು ದಾಳಿ ಮಾಡಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ ಯುವಕ ಯುವತಿ ಸೇರಿ ಒಟ್ಟು 50 ಜನರನ್ನ ವಶಕ್ಕೆ ಪಡೆದಿದ್ದರು. ಇದರಲ್ಲಿ ಒಟ್ಟು 35 ಜನರ ಮೆಡಿಕಲ್ ಟೆಸ್ಟ್ ಮಾಡಿಸಲಾಗಿತ್ತು. ಇದರಲ್ಲಿ ಐವರು ಡ್ರಗ್ಸ್ ಸೇವಿಸಿರೋದು ದೃಢವಾಗಿದೆ. ಈ ಗುಂಪಿನಲ್ಲಿ ಸಿದ್ಧಾಂತ್ ಕಪೂರ್ ಇರುವುದು ಖಚಿತಪಡಿಸಿಕೊಂಡ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಮಾಹಿತಿಯ ಪ್ರಕಾರ ಸಿದ್ಧಾಂತ್ ಹೋಟೆಲ್ನಲ್ಲಿ ಡಿಜೆ ಪ್ಲೈಯರ್ ಆಗಿದ್ದು, ಡ್ರಗ್ಸ್ ಸೇವನೆ ಮಾಡಿರೋದು ದೃಢವಾಗಿದೆ. ಇವರ ಜೊತೆ ಅಖೀಲ್ ಸೋನಿ, ಅಜೋದ್ ಸಿಂಗ್ ಪಂಜಾಬ್, ಅಖೀಲ್, ಅನಿ, ದರ್ಶನ್ ಸುರೇಶ್ ಇವರನ್ನು ಬಂಧಿಸಿದ್ದು ಇವರೆಲ್ಲರೂ ರಾತ್ರಿ ಪಾರ್ಟಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ತಿಳಿಸಿದ್ದಾರೆ.
ಇದೀಗ ಬಂಧನಕ್ಕೆ ಒಳಗಾದ ಸಿದ್ಧಾಂತ್ ಕಪೂರ್ ಮತ್ತು ಇನ್ನಿತರ 5 ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಪ್ರಕರಣ ಪ್ರಮುಖ ಆರೋಪಿ ಆಗಿರುವ ಸಿದ್ಧಾಂತ್ ಕಪೂರ್ ಪೊಲೀಸರ ಕಾರ್ಯದ ಬಗ್ಗೆ ಮಾತನಾಡಿ ಬೆಂಗಳೂರು ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
