ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆ ಆಗಿ ಪ್ರಪಂಚಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಅದರಲ್ಲೂ ಚಾರ್ಲಿ ನಾಯಿ ಕಂಡರೆ ಜನರಿಗೆ ಖುಷಿ ಜಾಸ್ತಿ. ಚಾರ್ಲಿ ಸಿನಿಮಾ ನೋಡಿದ ಪ್ರತಿಯೊಬ್ಬರು ಇದೀಗ ತಮ್ಮ ನಾಯಿಯನ್ನು ಬಹಳಷ್ಟು ಮುದ್ದಾಗಿ ಸಾಕುತ್ತಿದ್ದಾರೆ. ಇದೆಲ್ಲದರ ಮಧ್ಯೆ ಡಿಬಾಸ್ ದರ್ಶನ್ ಅವರ ಜೊತೆ ಇದ್ದ ನಾಯಿಯ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದ್ದು ಅಭಿಮಾನಿಗಳು ಚಾರ್ಲಿ ದರ್ಶನ್ ಅವರ ಗೆಳೆಯ ಎಂದು ಹೇಳುತ್ತಿದ್ದಾರೆ.
#777charlie is new, but charlie is already opd friend to Mass Hero #Dboss 🤩🔥#777Charlie @rakshitshetty @dasadarshan @Dcompany171 @Kiranraj61 @Kannada_BO pic.twitter.com/H1m2VPrpJt
— Troll Kannada Movies (@trollkannada_M) June 14, 2022
ದರ್ಶನ್ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಬಹಳ ಪ್ರೀತಿ ಜಾಸ್ತಿ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ದಲ್ಲಿ ಚಾರ್ಲಿ ರೀತಿಯಲ್ಲಿ ಇರುವ ನಾಯಿಯ ಜೊತೆ ದರ್ಶನ್ ಕಾಣಿಸಿಕೊಂಡಿದ್ದಾರೆ. ಇದು ಸುಮಾರು ನಾಲ್ಕೈದು ವರ್ಷಗಳ ಹಿಂದೆ ಐರಾವತ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತೆಗೆದ ವಿಡಿಯೋ. ಇದರಲ್ಲಿ ದರ್ಶನ್ ಶ್ವಾನಕ್ಕೆ ಪಾಠ ಹೇಳಿಕೊಡುತ್ತಿದ್ದರು.
ಈ ವಿಡಿಯೋದಲ್ಲಿ ದರ್ಶನ್ ಶ್ವಾನಕ್ಕೆ ಪಾಠ ಹೇಳಿಕೊಡುತ್ತಿರುವುದಲ್ಲದೆ ಅದಕ್ಕೆ ಬಿಸ್ಕತ್ ಕೂಡ ತಿನ್ನಿಸುತ್ತಿದ್ದಾರೆ. ತಮ್ಮ ಸಿನಿಮಾದ ಬಿಡುವಿನ ಸಮಯದಲ್ಲಿ ಈ ಶ್ವಾನದ ಜೊತೆ ಕಾಲ ಕಳೆಯುತ್ತಿದ್ದರು. ಈ ನಾಯಿ ನೋಡಲು ಚಾರ್ಲಿ ರೀತಿಯಲ್ಲೇ ಇರುವುದರಿಂದ ಜನರು ಇದನ್ನು ಚಾರ್ಲಿ ಸಿನಿಮಾಗೆ ಕನೆಕ್ಟ್ ಮಾಡಿ ದರ್ಶನ್ ಅವರಿಗೆ ಚಾರ್ಲಿ ಹಳೆಯ ಗೆಳೆಯ ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
