ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಬರೀ ಪ್ಯಾನ್ ಇಂಡಿಯಾ ಸಿನಿಮಾದೆ ಹವಾ. ಅದರಲ್ಲೂ ನಮ್ಮ ಕನ್ನಡ ಸಿನಿಮಾಗಳು ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಈ ಲಿಸ್ಟಿನಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕೂಡ ಸೇರಿದೆ. ಈ ಸಿನಿಮಾವನ್ನು ಅಭಿಮಾನಿಗಳಿಂದ ಹಿಡಿದು, ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಸಹ ವೀಕ್ಷಿಸುತ್ತಿದ್ದಾರೆ. ಈ ಸಿನಿಮಾವನ್ನು ವೀಕ್ಷಿಸಿದ ಜಗ್ಗೇಶ್ ರಕ್ಷಿತ್ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈ ಚಿತ್ರವನ್ನು ವೀಕ್ಷಿಸಿ ಇದರ ಕುರಿತು ಮಾತನಾಡಿದ ಜಗ್ಗಣ್ಣ “ನಾನು ಒಂದೇ ಒಂದು ಮಾತು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನಮ್ಮ ರಕ್ಷಿತ್ ಶೆಟ್ಟಿ ಕನ್ನಡದ ಆಮಿರ್ ಖಾನ್.” ಎಂದು ಹೇಳಿ ಅವರನ್ನು ಹೊಗಳಿದ್ದಾರೆ.
#777Charlie ಚಿತ್ರದ ಬಗ್ಗೆ ನಮ್ಮ ಜಗ್ಗಣ್ಣ ಮಾತು ❤️ @Jaggesh2 @rakshitshetty @Kiranraj61#jaggeshfc #jaggesh #bjp #hasyachakravarthi #navarasanayakajaggesh #kannadiga #actor #politician pic.twitter.com/QDOfNGbbyG
— ಜಗ್ಗೇಶ್ ಅಭಿಮಾನಿಗಳು (@jaggeshfans) June 14, 2022
“ರಕ್ಷಿತ್ ಶೆಟ್ಟಿ ಒಂದು ಅದ್ಭುತವಾದ ಪ್ರಯೋಗವನ್ನು ಈ ಸಿನಿಮಾದಲ್ಲಿ ಮಾಡಿದ್ದಾನೆ. ಬಹುಶ: ಯಾರದ್ದೇ ಕಲ್ಲು ಹೃದಯವೂ ಕೂಡ ಈ ಚಿತ್ರವನ್ನು ನೋಡಿದರೆ, ಕರಗಿ ಹೋಗುತ್ತಾರೆ. ನಾನು ನನ್ನ ಕರಿಯರ್‌ನಲ್ಲಿ ಎರಡು ಅನಿಮಲ್ ಸಿನಿಮಾ ನೋಡಿದ್ದೇನೆ. ಒಂದು ಇಂಗ್ಲಿಷ್. ಈತರ ಒಂದು ಸಿನಿಮಾ ಮಾಡಬಹುದಾ? ಅಂತ ನಾನು ನಿರೀಕ್ಷೆ ಮಾಡಿದ್ದೆ. ಅದು ಒನ್ ಅಂಡ್ ಓನ್ಲಿ ರಕ್ಷಿತ್ ಶೆಟ್ಟಿ ಮಾಡಿದ್ದಾನೆ. ಯಾರು ಪ್ರಾಣಿ ಪ್ರೇಮಿಗಳಿದ್ದಾರೋ ಅವರಿಗೆ ಈ ಚಿತ್ರ ತುಂಬಾನೇ ಕಾಡುತ್ತೆ.” ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
