ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಲವಾರು ಹಿಂಸಾಚಾರಗಳು ನಡೆಯುತ್ತಿವೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಇತ್ತೀಚಿಗೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲಾದ ಹಲ್ಲೆಯನ್ನು ಖಂಡಿಸಿ ನಟಿ ಸಾಯಿ ಪಲ್ಲವಿ ಅವರು ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳೋಣ ಬನ್ನಿ.
ಇತ್ತೀಚಿಗೆ ನಡೆದ ಸಂಧರ್ಶನವೊಂದರಲ್ಲಿ ಮಾತನಾಡಿದ ಇವರು ‘ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ತೋರಿಸಲಾಗಿದೆ. ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಹಾಗಾದರೆ ಈ ಎರಡು ಘಟನೆಗಳ ನಡುವಿನ ವ್ಯತ್ಯಾಸ ಎಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.
Dear @Sai_Pallavi92
There is a huge difference in a random Muslim being beaten & an entire community being uprooted.
Please don't trivialise my pain.
Come & see any of our broken homes & hearts. We are witnesses to Genocide but await justice.
Not Everything is Propaganda. pic.twitter.com/YhN9r2QTKM
— Kashmiri Hindu (@BattaKashmiri) June 14, 2022
ಸಾಯಿ ಪಲ್ಲವಿ ಅವರ ಈ ಮಾತಿಗೆ ಇದೀಗ ಪರ ವಿರೋಧಗಳು ಶುರುವಾಗುತ್ತಿದೆ. ಒಂದು ಕಡೆ ಜನರು ಇವರ ಮಾತನ್ನು ಬೆಂಬಲಿಸಿದರೆ ಮತ್ತೊಂದೆಡೆ ಇದನ್ನು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಇವರ ಧೈರ್ಯದ ಬಗ್ಗೆ ಅಚ್ಚರಿ ಸಹ ವ್ಯಕ್ತಪಡಿಸಿದ್ದಾರೆ.
ಸದ್ಯ ಸಾಯಿ ಪಲ್ಲವಿ ಅವರು ತಮ್ಮ ಮುಂಬರುವ ತೆಲುಗು ಚಿತ್ರ ‘ವಿರಾಟ ಪರ್ವಂ’ ಪ್ರಚಾರದಲ್ಲಿದ್ದಾರೆ. ಇವರು ಅಭಿನಯದ ವಿರಾಟ ಪರ್ವಂ’ ಸಿನಿಮಾ ಜೂನ್ 17ರಂದು ಬಿಡುಗಡೆಯಾಗಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
