ಪುಟ್ಟ ಉಕ್ರೇನ್ ದೇಶದ ವಿರುದ್ಧ ಯುದ್ಧ ಸಾರಿದ ದಿನದಿಂದ ಪುಟಿನ್ ಅವರು ಹಲವಾರು ಭಲಿಷ್ಟ ದೇಶಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇವರ ಆರೋಗ್ಯದ ಬಗ್ಗೆ ನಮಗೆಲ್ಲರಿಗೂ ಗೊತ್ತು. ಇವರು ಕ್ಯಾನ್ಸರ್ ಇಂದ ಬಳಲುತ್ತಿದ್ದು ಇವರು ಹೆಚ್ಚು ದಿನಗಳ ಕಾಲ ಬದುಕುವುದಿಲ್ಲ ವೆಂದು ಸ್ವತಃ ವೈದ್ಯರೇ ತಿಳಿಸಿದ್ದರು. ಇದೀಗ ಇವರ ಆರೋಗ್ಯದಲ್ಲಾಗುತ್ತಿರುವ ಏರುಪೇರಿನ ಕುರಿತು ಬಿಡುಗಡೆಯಾಗಿರುವ ವಿಡಿಯೋ ಸಕತ್ ವೈರಲ್ ಆಗುತ್ತಿದೆ
Putin’s legs shaking, he looks unsteady on his feet, fueling more speculation about his health. Video was taken Sunday. pic.twitter.com/TIVfK30tAp
— Mike Sington (@MikeSington) June 14, 2022
ಭಾನುವಾರ ನಡೆದ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಪುಟಿನ್ ಅವರ ದೇಹದಲ್ಲಿ ಆದ ಬದಲಾವಣೆಯನ್ನು ನಾವು ಗಮನಿಸಬಹುದು. ಚಲನಚಿತ್ರ ನಿರ್ಮಾಪಕಿ ನಿಕಿತಾ ಮಿಖೈಲೋವ್ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಭಾಷಣ ಮಾಡಲು ಶುರುಮಾಡುತ್ತಾರೆ. ಇವರು ಭಾಷಣ ಮಾಡುತ್ತಿದ್ದಂತೆ ಇವರ ಕಾಲುಗಳು ಅಲುಗಾಡಲು ಶುರುವಾಗುತ್ತದೆ. ಇವರಿಗೆ ಬ್ಯಾಲೆನ್ಸ್ ಸಿಗದೇ ಇದ್ದ ಕಾರಣ ವೇದಿಕೆಯ ಡಯಾಸ್ ಅನ್ನು ಹಿಡಿದು ಕೆಲ ಕಾಲ ತೂಗಾಡುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು ದಿನೇ ದಿನೇ ಪುಟಿನ್ ಅವರ ಅರೋಗ್ಯ ಕ್ಷೀಣಿಸುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.
ಪುಟಿನ್ ಅವರ ಆರೋಗ್ಯದ ಕುರಿತು ಮಾತನಾಡಿದ ವೈದ್ಯರು ಪುಟಿನ್‌ಗೆ ಕ್ಯಾನ್ಸರ್ ಕಾಯಿಲೆ ಇಂದ ಬಳಲುತ್ತಿದ್ದು, ಹೆಚ್ಚೆಂದರೆ ಇನ್ನೊಂದು 3 ವರ್ಷ ಬದುಕಬಹುದು ಅಷ್ಟೇ. ಪುಟಿನ್ ಅವರಿಗೆ ಸದ್ಯ 69 ವರ್ಷ ವಯಸಾಗಿದ್ದು ಅವರ ಕಣ್ಣಿನ ದೃಷ್ಟಿಯೂ ಗಂಭೀರವಾಗಿ ಹದಗೆಟ್ಟಿದೆ ಹಾಗೂ ಬೆರಳುಗಳು ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
