fbpx
ಸಮಾಚಾರ

ಜೂನ್ 17: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಜೂನ್ 17, 2022 ಶುಕ್ರವಾರ
ವರ್ಷ : 1944, ಶೋಭಾಕೃತ
ತಿಂಗಳು : ಜ್ಯೇಷ್ಠ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ತೃತೀಯಾ : Jun 16 09:45 am – Jun 17 06:11 am; ಚತುರ್ಥೀ : Jun 17 06:11 am – Jun 18 02:59 am; ಪಂಚಮೀ : Jun 18 02:59 am – Jun 19 12:19 am
ನಕ್ಷತ್ರ : ಉತ್ತರಾಷಾಢ: Jun 16 12:37 pm – Jun 17 09:56 am; ಶ್ರವಣ: Jun 17 09:56 am – Jun 18 07:39 am
ಯೋಗ : ಇಂದ್ರ: Jun 16 09:08 pm – Jun 17 05:17 pm; ವೈಧೃತಿ: Jun 17 05:18 pm – Jun 18 01:50 pm
ಕರಣ : ವಿಷ್ಟಿ: Jun 16 07:56 pm – Jun 17 06:11 am; ಬಾವ: Jun 17 06:11 am – Jun 17 04:32 pm; ಬಾಲವ: Jun 17 04:32 pm – Jun 18 02:59 am; ಕುಲವ: Jun 18 02:59 am – Jun 18 01:35 pm

Time to be Avoided
ರಾಹುಕಾಲ : 10:44 AM to 12:20 PM
ಯಮಗಂಡ : 3:31 PM to 5:07 PM
ದುರ್ಮುಹುರ್ತ : 08:30 AM to 09:21 AM, 12:46 PM to 01:37 PM
ವಿಷ : 01:33 PM to 03:00 PM
ಗುಳಿಕ : 7:33 AM to 9:09 AM

Good Time to be Used
ಅಮೃತಕಾಲ : 10:14 PM to 11:41 PM
ಅಭಿಜಿತ್ : 11:54 AM to 12:46 PM

Other Data
ಸೂರ್ಯೋದಯ : 5:57 AM
ಸುರ್ಯಾಸ್ತಮಯ : 6:43 PM

 

 

 

 

ಬಂಧುಗಳ ಆಗಮನ, ಸ್ವತ್ತು ತಗಾದೆಗಳು ಮಧ್ಯಸ್ಥಿಕೆಯಿಂದ ಇತ್ಯರ್ಥವಾಗುವುದು. ಹಿರಿಯ ಸಹೋದರನು ನಿಮಗೆ ಇಂದು ಅನುಕೂಲಕರನಾಗಿದ್ದು ನಿಮ್ಮ ಕಾರ್ಯ ಯೋಜನೆಗಳಿಗೆ ಬೆಂಬಲ ನೀಡುವರು.

 

ಹಲವು ತಪ್ಪುಗಳು ನಿಮ್ಮನ್ನು ಪಾಪ ಪ್ರಜ್ಞೆಯಲ್ಲಿ ಬಾಧಿಸುವುದು. ಅದಕ್ಕಾಗಿ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ಹಾಗಾಗಿ ನಿಮ್ಮ ತಪ್ಪುಗಳನ್ನು ಪ್ರಾಂಜ್ವಲ ಮನಸ್ಸಿನಿಂದ ಒಪ್ಪಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿರಿ.ಸಂಗಾತಿಯ ಸಲಹೆಗಳನ್ನು ಸ್ವೀಕರಿಸಿ ಮುಂದುವರಿಯುವುದು ಒಳ್ಳೆಯದು.

 

ಅನಗತ್ಯ ಚಿಂತೆ ದೂರವಾಗಲಿದೆ. ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಂವಹನದ ಮೂಲಕ ಬಂಧುಗಳಲ್ಲಿ ಇದ್ದ ಮನಸ್ತಾಪಗಳು ಕಡಿಮೆ ಆಗುವುದು. ಕುಲದೇವರನ್ನು ನೆನೆಸಿಕೊಳ್ಳಿ.

 

ಖರ್ಚಿನ ಮೇಲೆ ಹಿಡಿತವಿರಲಿ. ದೂರದಲ್ಲಿರುವ ಮಕ್ಕಳಿಂದ ಶುಭ ವಾರ್ತೆ ಬರುವುದು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವಿರಿ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳಿರಿ.

 

 

ಗಂಡ ಹೆಂಡತಿಯರಲ್ಲಿನ ಮನಸ್ತಾಪ ಕಡಿಮೆ ಆಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುವುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸಲು ಗುರುವಿನ ಆಶೀರ್ವಾದ ಪಡೆಯಿರಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

 

 

ಕೋಪವೇ ನಿಮ್ಮ ಮೊದಲ ಶತ್ರು. ಅದನ್ನು ತಿಳಿದು ತಿಳಿದು ನೀವು ಮನೆಯ ಸದಸ್ಯರ ಮೇಲೆ ಕೋಪಗೊಳ್ಳುವುದರಿಂದ ಸಂಬಂಧಗಳಲ್ಲಿ ವಿರಸ ಮೂಡುವುದು. ಆದಷ್ಟು ತಾಳ್ಮೆಯಿಂದ ಇರಿ. ಶಿವನ ಜಪ ಮಾಡಿರಿ. ಇಲ್ಲವೇ ಮೌನ ತಾಳಿರಿ.

 

 

ಇಂದು ನೀವು ಹೆಚ್ಚು ಮೌನವನ್ನು ಆಶ್ರಯಿಸುವುದು ಒಳ್ಳೆಯದು. ನಿಮ್ಮನ್ನು ದ್ವೇಷಿಸುತ್ತಿದ್ದವರೂ ಇಂದು ನಿಮಗೆ ಹತ್ತಿರವಾಗುವರು. ಮನೆ ಕಟ್ಟಲು ನಿವೇಶನ ಖರೀದಿಸಲು ಮನಸು ಮಾಡುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

 

 

ನಿಮ್ಮ ಬುದ್ಧಿ ಸಾಮರ್ಥ್ಯ‌ದ ಬಗ್ಗೆ ನಿಮ್ಮ ಸುತ್ತಲಿನವರಿಗೆ ತಿಳಿಯಲಿದೆ. ಅವರೆಲ್ಲರೂ ನಿಮ್ಮ ಬುದ್ಧಿಮತ್ತೆಯನ್ನು ಮೆಚ್ಚುವರು. ಉದ್ಯೋಗಸ್ಥರಿಗೆ ಕೆಲಸದಲ್ಲಿ ಪ್ರಗತಿ ಸಿದ್ಧಿಯಾಗಲಿದೆ. ಈದಿನ ಬರುವ ವಾರ್ತೆಯು ಖುಷಿ ನೀಡುವುದು.

 

 

ಖರ್ಚುವೆಚ್ಚಗಳಲ್ಲಿ ಬದಲಾವಣೆ ಉಂಟಾಗುವುದು. ಈದಿನ ಹಣಕಾಸಿನ ಮುಗ್ಗಟ್ಟನ್ನು ಎದುರಿಸುವಿರಿ. ಮನೆಯ ಸದಸ್ಯರ ಸಕಾಲಿಕ ನೆರವು ನಿಮಗೆ ನೆಮ್ಮದಿ ಮತ್ತು ಸಂತಸ ನೀಡುವುದು.ಪ್ರತಿರೋಧಗಳ ನಡುವೆಯೂ ಗೆಲ್ಲುವ ಆಶಾಭಾವನೆ ನಿಮ್ಮದಾಗುವುದು. ಆರೋಗ್ಯದ ಕಡೆ ತುಸು ಗಮನ ಕೊಡುವುದು ಒಳ್ಳೆಯದು.

 

 

ಈದಿನ ನಿಮ್ಮ ಮನೋಕಾಮನೆಗಳು ಕೈಗೂಡುವುದು. ಗುರುವಿನ ಅನುಗ್ರಹವಿದ್ದು ಸಕಾಲದಲ್ಲಿ ಹಣಕಾಸು ದೊರೆಯುವುದು.ಮಾತುಗಾರಿಕೆಯ ಪ್ರಭಾವದಿಂದ ಸುತ್ತಮುತ್ತಲಿನವರ ವಿರೋಧವನ್ನು ಕಟ್ಟಿಕೊಳ್ಳುವಿರಿ. ಮನೆಯಲ್ಲಿ ಸಂಗಾತಿಯ ಹುಸಿ ಕೋಪವು ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚುವುದು. ಗುರು ಬಲವಿರುವುದರಿಂದ ಚಿಂತೆ ಇಲ್ಲ.

 

ಅನಗತ್ಯ ಕೆಲಸ ಮಾಡಲು ಮುಂದಾಗುವಿರಿ. ಇಲ್ಲವೇ ಮಾಡುವ ಕೆಲಸದಲ್ಲಿ ಉದಾಸೀನ ತೋರುವಿರಿ. ಪ್ರಯಾಣದಲ್ಲಿ ಎಚ್ಚರ. ಗುರುರೂಪದ ಹಿರಿಯರೊಬ್ಬರ ಆಶೀರ್ವಾದವನ್ನು ಇಂದು ನೀವು ಪಡೆಯುವಿರಿ,ಕೆಲಸದ ಸ್ಥಳ ಬದಲಾವಣೆ ಅಥವಾ ವಾಸ ಮಾಡುವ ಸ್ಥಳದ ಬಗ್ಗೆ ಚಿಂತಿಸುವಿರಿ. ಆದಾಗ್ಯೂ ಕುಲದೇವರ ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ.

 

ನಯವಾದ ಮಾತುಗಳನ್ನು ನಂಬಿ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವಿರಿ. ಆದಷ್ಟು ಜಾಗ್ರತೆಯಿಂದ ಇರಿ. ಅಕಾಲದಲ್ಲಿ ಸೇವಿಸಿದ ಆಹಾರದ ವ್ಯತ್ಯಯದಿಂದ ಉದರಶೂಲೆಯನ್ನು ಅನುಭವಿಸುವಿರಿ,ಚಾತುರ್ಯದ ಮಾತುಗಳು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top