ನಟಿ ಲಕ್ಷಿ ಎಂದರೆ ಯಾರಿಗೆ ತಾನೇ ಪರಿಚಯವಿಲ್ಲ ಹೇಳಿ. ಆಗಿನಕಾಲದಲ್ಲಿ ಚಂದನವನದ ಬಹು ಬೇಡಿಕೆಯ ನಟಿ ಇವರು. ಅಪಾರವಾದ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಆದರೆ ಇಂದು ಇವರ ಮಗಳು ಸೋಪ್ ಮಾರಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರೆ ನಂಬಲು ಕಷ್ಟವಾಬಹುದು. ಆದರೆ ಇದು ಸತ್ಯ.
ಲಕ್ಷ್ಮಿ ಅವರು 1969ರಲ್ಲಿ ಭಾಸ್ಕರ್ ಅವರನ್ನು ಮದುವೆ ಆದರು. ಇವರಿಗೆ ಐಶ್ವರ್ಯ ಎಂಬ ಮಗುವಿನ ಜನನ ವಾಯಿತು. ಆದರೆ ಇವರಿಬ್ಬರ ಸಂಸಾರ ತುಂಬಾ ದಿನ ಉಳಿಲಿಲ್ಲ. ಇಬ್ಬರೂ 1974ರಲ್ಲಿ ಬೇರೆ ಆದರು. ಇವರ ಮಗಳು ಐಶ್ವರ್ಯ ಅವರಿಗೆ ಮೊದಲು ಹಲವಾರು ಸಿನಿಮಾಗಳಿಂದ ಆಫರ್ ಬರುತ್ತಿತ್ತು. ಆದರೆ ಇದೀಗ ಒಂದು ಅವಕಾಶ ಸಿಗುತ್ತಿಲ್ಲ. ಹೀಗಾಗಿ ಸೋಪ್ ಮಾರುತ್ತಿರುವುದರ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಖಾಸಗಿ ಸುದ್ದಿ ಮಾದ್ಯಮದಲ್ಲಿ ನಡೆಸಿದ ಸಂಧರ್ಶನದಲ್ಲಿ ಮಾತನಾಡಿದ ಐಶ್ವರ್ಯ “ನನಗೆ ಈಗ ಚಿತ್ರರಂಗದಲ್ಲಿ ಮೊದಲಿನ ಹಾಗೆ ಆಫರ್ಗಳು ಇಲ್ಲ. ಒಂದು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೇನೆ. ಸೋಪ್ ಮಾರಿ ಜೀವನ ಮಾಡುತ್ತಿದ್ದೇನೆ. ಶೂಟಿಂಗ್ ಇದ್ದಾಗ ಶೂಟಿಂಗ್ ಹೋಗುತ್ತೇನೆ. ಅವಕಾಶಗಳು ಬರುತ್ತಿಲ್ಲ ಹೀಗಾಗಿ ಜೀವನ ನಡೆಸಲು ಸೇಲ್ಸ್ಗರ್ಲ್ ಆಗಿದ್ದೀನೆ. ಒಂದೊಮ್ಮೆ ಟಾಯ್ಲೆಟ್ ಕ್ಲೀನ್ ಮಾಡುವ ಪರಿಸ್ಥಿತಿ ಬಂದರೂ ನಾನು ಮಾಡುತ್ತೇನೆ. ಅದರಲ್ಲಿ ತಪ್ಪೇನಿದೆ?” ಎಂದು ಹೇಳಿದರು.
ಇದಲ್ಲದೆ ‘ನಮ್ಮ ಮನೆಗೆ ಬಂದರೆ ಫರ್ನಿಚರ್ ಕಾಣಲ್ಲ, ಟಿವಿ ಕಾಣಲ್ಲ. ನಾನು ಒಂದೇ ಹೊತ್ತು ಊಟ ಮಾಡುತ್ತಿದ್ದೇನೆ. ನನ್ನ ಲೈಫ್ ಬದಲಾಗಬೇಕು ಎಂದರೆ ಒಂದೊ ದೊಡ್ಡ ಸೀರಿಯಲ್ ಆಫರ್ ಸಿಗಬೇಕು. ನಾನು ಎಲ್ಲರ ಎದುರು ನಗುತ್ತಿರುತ್ತೇನೆ. ಮನೆಗೆ ಹೋಗಿ ಅಳುತ್ತೇನೆ’ ಎಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
