ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್ಲೈನ್ ಶಾಪಿಂಗ್ ನ ಮೊರೆ ಹೋಗಿದ್ದಾರೆ. ತಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು ತಮಗೆ ಬೇಕಾದ ವಸ್ತುವನ್ನು ಬುಕ್ ಮಾಡಿ ಪಡೆದುಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಇಂದ ಜನ ಮೋಸ ಹೋಗುತ್ತಿರುವುದನ್ನು ನಾವು ಹಲವಾರು ಬಾರಿ ಕಂಡಿದ್ದೇವೆ. ಇದೀಗ ಇದಕ್ಕೆ ಮತ್ತೊಂದು ಉದಾಹರಣೆ ಸೇರಿಕೊಂಡಿದೆ.
ಆನ್ಲೈನ್ ಶಾಪಿಂಗ್ ಗಳಲ್ಲಿ ಹೆಸರಾಂತ ಕಂಪನಿಗಳಲ್ಲಿ ಅಮೆಜಾನ್ ಕೂಡ ಒಂದು. ಈ ಪ್ರತಿಷ್ಠಿತ ಕಂಪನಿಯಲ್ಲಿ ಮಹಿಳೆ ಒಬ್ಬಳು ಲೆದರ್ ಚೇರ್ ಬುಕ್ ಮಾಡಿದ್ದಾರೆ. ಆದರೆ ಇವರಿಗೆ ಒಂದು ಬಹು ದೊಡ್ಡ ಆಶ್ಚರ್ಯ ಕಾದಿತ್ತು. ಏಕೆಂದರೆ ಇವರು ಬುಕ್ ಮಾಡಿದ್ದು ಲೆದರ್ ಚೇರ್ ಆದರೆ ಇವರಿಗೆ ಸಿಕ್ಕಿದ್ದು ರಕ್ತ ತುಂಬಿದ ಟ್ಯೂಬ್. ಇದನ್ನು ನೋಡಿ ಮಹಿಳೆ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.
i’m as terrified as i am confused 🫣 pic.twitter.com/0tSvkqK1Oo
— Jen Begakis (@jenbegakis) June 16, 2022
ಇದರ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಹಿಳೆ “ಅಮೆಜಾನ್ನಿಂದ ನಾನು ಆರ್ಡರ್ ಮಾಡಿದ ಚರ್ಮದ ಕುರ್ಚಿಯನ್ನು ರಕ್ತ ಸಂಗ್ರಹಣಾ ಟ್ಯೂಬ್ನೊಂದಿಗೆ ಪ್ಯಾಕ್ ಮಾಡಲಾಗಿದೆ ಎಂದು ನಾನು ನಿಮಗೆ ಹೇಳಿದರೆ ನೀವು ನಂಬುವಿರೇ ಆ ಟ್ಯೂಬ್ ಸಂಪೂರ್ಣ ರಕ್ತದಿಂದ ತುಂಬಿದೆ. ಇದನ್ನು ನೋಡಿ ನನಗೆ ವಿವರಿಸಲು ಪದಗಳೇ ಬರುತ್ತಿಲ್ಲ. ನಾನು ಗೊಂದಲಕ್ಕೊಳಗಾಗಿದ್ದೇನೆ. ಈ ಬಗ್ಗೆ ಆರಂಭದಲ್ಲಿ ನಾನು ಆಮೇಜಾನ್ನಿಂದ ವಿವರ ಕೇಳಿದೆ ಆದರೆ ನಂತರ ಅವರು ನನ್ನನ್ನು ಸಂಪರ್ಕಿಸಿಲ್ಲ ಎಂದು” ಹೇಳಿದ್ದಾಳೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
