ಇತ್ತೀಚಿನ ದಿನಗಳಲ್ಲಿ ವೈದ್ಯರ ನಿರ್ಲಕ್ಷದಿಂದ ಹಲವಾರು ಘಟನೆಗಳು ನಡೆದಿರುವುದನ್ನು ನಾವು ಹಲವು ಬಾರಿ ಗಮನಿಸಿದ್ದೇವೆ. ಆದರೆ ಜೀವ ಉಳಿಸುವ ವೈದ್ಯರೇ ಇಂದು ಒಂದು ತಾಯಿಯ ಜೀವಕ್ಕೆ ಅಪತನ್ನು ತಂದಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮಹಿಳೆ ಒಬ್ಬಳು ಹೆರಿಗೆ ನೋವು ಕಾಣಿಸಿಕೊಂಡಿರುವ ಕಾರಣ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ಮಹಿಳಾ ಸ್ತ್ರೀರೋಗತಜ್ಞರು ಲಭ್ಯವಿಲ್ಲದ ಕಾರಣ ಯಾವುದೇ ಅನುಭವವಿಲ್ಲದ ಆಸ್ಪತ್ರೆಯ ಸಿಬ್ಬಂದಿ ಸೇರಿಕೊಂಡು ಆಕೆಗೆ ಹೆರಿಗೆ ಮಾಡಿಸಲು ಪ್ರಯತ್ನಿಸಿದ್ದಾರೆ. ಈ ಆಸ್ಪತ್ರೆಯ ಸಿಬ್ಬಂದಿ ಮಹಿಳೆಗೆ ಡೆಲಿವರಿ ಮಾಡುವಾಗ ಎಡವಟ್ಟು ಮಾಡಿದ್ದಾರೆ. ನವಜಾತ ಶಿಶುವಿನ ತಲೆ ಕತ್ತರಿಸಿ ಅದನ್ನು ಹೊರತೆಗೆಯಲಾಗದೆ ಅದನ್ನು ಮಹಿಳೆಯ ಒಟ್ಟೆಯಲ್ಲೇ ಬಿಟ್ಟಿದ್ದಾರೆ. ಇದರಿಂದ ಮಹಿಳೆಯ ಜೀವಕ್ಕೆ ಆಪತ್ತಾಗಿದ್ದು ಆಕೆಯನ್ನು ಉಳಿಸುವುದು ಕಷ್ಟ ಎಂದು ತಿಳಿಸಲಾಗಿದೆ.
ಕೊನೆಗೆ ಆಕೆಯ ಕುಟುಂಬದವರು ಆ ಮಹಿಳೆಯನ್ನು LUMHSಗೆ ಕರೆತಂದಿದ್ದಾರೆ. ಅಲ್ಲಿ ನವಜಾತ ಶಿಶುವಿನ ಉಳಿದ ದೇಹವನ್ನು ವೈದ್ಯರು ತಾಯಿಯ ಗರ್ಭದಿಂದ ಹೊರತೆಗೆದು, ಆಕೆಯ ಜೀವವನ್ನು ಉಳಿಸಿದ್ದಾರೆ. ಇದರ ಕುರಿತು ವೈದ್ಯರು ಮಾತನಾಡಿದು “ಮಗುವಿನ ತಲೆ ಒಳಗೆ ಸಿಲುಕಿಕೊಂಡಿತ್ತು. ತಾಯಿಯ ಗರ್ಭಾಶಯವು ಛಿದ್ರವಾಗಿತ್ತು. ಆಕೆಯ ಜೀವವನ್ನು ಉಳಿಸಲು ಆಕೆಯ ಹೊಟ್ಟೆಯ ಆಪರೇಷನ್ ಮಾಡಿ, ಮಗುವಿನ ತಲೆಯನ್ನು ಹೊರತೆಗೆಯಬೇಕಾಯಿತು ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
