ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು ಜುಲೈ 1 ರಿಂದ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದರಲ್ಲಿ ಉದ್ಯೋಗಿಯ ವೇತನ, ಪಿಎಫ್ ಕೊಡುಗೆ, ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಮಹತ್ತರ ಬದಲಾವಣೆ ಆಗಲಿದೆ.
ಈ ಹೊಸ ಕಾರ್ಮಿಕ ಸಂಹಿತೆ ಜಾರಿಗೆ ಬಂದರೆ ನಮ್ಮ ಕೈಗೆ ಬರುವ ಸಂಬಳದಲ್ಲಿ ಕಡಿತ ಉಂಟಾಗುತ್ತದೆ. ನಮ್ಮ ಪಿಎಫ್ ಹಾಗೂ ಗ್ಯಾಚ್ಯುಟಿಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ವಾರದಲ್ಲಿ 4 ದಿನ ಮಾತ್ರ ಕೆಲಸಕ್ಕೆ ಹಾಜರಾಗಬೇಕಾಗಿದ್ದು, ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.
ಇನ್ನು ರಜಾ ವಿಷಯಕ್ಕೆ ಸಂಬಂಧಿಸಿದರೆ 1 ವರ್ಷದಲ್ಲಿ ಸರ್ಕಾರಿ ಇಲಾಖೆಗಳಿಗೆ 30 ದಿನಗಳ ರಜೆ ಸಿಗಲಿದ್ದು ರಕ್ಷಣಾ ಸಿಬ್ಬಂದಿಗೆ 60 ದಿನಗಳ ರಜೆ ಸಿಗಲಿದೆ. ಕ್ಯಾರಿ ಫಾರ್ವರ್ಡ್ ಮಾದರಿಯಲ್ಲಿ ಉದ್ಯೋಗಿಗಳು 300 ರಜೆಯನ್ನು ನಗದಾಗಿ ಪರಿವರ್ತಿಸಬಹುದು. ಪ್ರಸ್ತುತ ವಿವಿಧ ಸರ್ಕಾರಿ ವಿಭಾಗಗಳಿಗೆ 240 ರಿಂದ 300 ರಜೆಗಳು ನೀಡಲಾಗುತ್ತದೆ. 20 ವರ್ಷಗಳ ಸೇವೆಯ ಬಳಿಕ ಉದ್ಯೋಗಿಗಳು ಗಳಿಸಿದ ರಜೆಯನ್ನು ನಗದಾಗಿ ಪರಿವರ್ತಿಸಬಹುದಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
