ಮಧ್ಯದ ದೊರೆ, ಆರ್ಸಿಬಿ ತಂಡದ ಮಾಜಿ ಓನರ್ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಗೇಲ್ ಅವರನ್ನು ಭೇಟಿಯಾದ ಫೋಟೋವನ್ನು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ”ನನ್ನ ಆತ್ಮೀಯ ಗೆಳೆಯ ಕ್ರಿಸ್ಟೋಪರ್ ಹೆನ್ರಿ ಗೇಲ್ ಅವರನ್ನು ಭೇಟಿಯಾಗಿ ಖುಷಿಯಾಯಿತು. ನಾನು ಯೂನಿವರ್ಸೆಲ್ ಬಾಸ್ ಖ್ಯಾತಿಯ ಆತನನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡಾಗಿನಿಂದಲೂ ನಾವಿಬ್ಬರು ಒಳ್ಳೆಯ ಗೆಳೆತನ ಹೊಂದಿದ್ದೇವೆ. ಆತನನ್ನು ಆಟಗಾರನನ್ನಾಗಿ ನಮ್ಮ ತಂಡಕ್ಕೆ ಸೇರಿಸಿಕೊಂಡಿದ್ದು ಒಳ್ಳೆಯ ಆಯ್ಕೆ” ಎಂದು ವಿಜಯ್ ಮಲ್ಯ ಬರೆದುಕೊಂಡಿದ್ದಾರೆ.
ಅಂದಹಾಗೆ ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಸೂಪರ್ ಕಿಂಗ್ಸ್ ತಂಡಗಳಲ್ಲಿ ಐಪಿಎಲ್ ಆಡಿದ್ದ ಕ್ರಿಸ್ ಗೇಲ್ ಸದ್ಯ ಐಪಿಎಲ್ ಪಂದ್ಯಗಳಿಂದ ದೂರ ಉಳಿದಿದ್ದಾರೆ. 2011ರಲ್ಲಿ ಗೇಲ್ರನ್ನು ಆರ್ಸಿಬಿ ತಂಡ ಖರೀದಿಸಿತ್ತು. ಆ ಬಳಿಕ ಆರ್ಸಿಬಿ ತಂಡದಲ್ಲಿ ಮಿಂಚಿದ ಗೇಲ್ರನ್ನು 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಖರೀದಿಸಿತು. 2022ರ ಐಪಿಎಲ್ ಮೆಗಾ ಹರಾಜಿನಿಂದ ಸ್ವತಃ ಗೇಲ್ ಹಿಂದೆ ಸರಿದು ಐಪಿಎಲ್ನಲ್ಲಿ ಆಡಿರಲಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
