ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗೋವಾ ಟ್ರಿಪ್‌ಗೆ ಹೋಗಿ ಸೊಮರ್ ಸಾಲ್ಟ್‌ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ದಿಗಂತ್ ಅವರ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ನಿನ್ನೆ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಇಂದು ಅವರನ್ನು ಐಸಿಯುನಲ್ಲಿ ಇಡಲಾಗಿತ್ತು. ಇದೀಗ ನಟ ದಿಗಂತ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್ ಮಾಡಲಾಗಿದೆ.
ವೈದ್ಯರ ಸಲಹೆ:
ಇನ್ನು ಯಾವುದೇ ಶೂಟಿಂಗ್‌ಗೆ ಹೋಗದೇ, ಮೂರು ತಿಂಗಳು ಮನೆಯಲ್ಲೇ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಅಲ್ಲದೆ ಮೂರು ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
Happy to let you all know that Diganth’s surgery went well yesterday and he is on the road to a speedy recovery!
Heartfelt thanks to all the fans, well wishers, friends in the media and KFI for their prayers and best wishes!🙏🏼 pic.twitter.com/f2rgyZRIpk— Aindrita Ray (@AindritaR) June 23, 2022
ದಿಗಂತ್ ಆರೋಗ್ಯದ ಬಗ್ಗೆ ನೆನ್ನೆ ವೈದ್ಯರು ಮಾಹಿತಿ ನೀಡಿದ್ದರು, ‘ದಿಗಂತ್ ಕುತ್ತಿಗೆಗೆ ಪ್ಯಾಕ್ಚರ್ ಆಗಿತ್ತು. ಅದನ್ನ ಆಪರೇಷನ್ ಮಾಡಿದ್ದೇವೆ. ನಿನ್ನೆಗಿಂತ ಇಂದು ಆಕ್ಟೀವ್ ಆಗಿದ್ದಾರೆ. ಅವ್ರೆ ಎದ್ದು ಟಾಯ್ಲೆಟ್ ಹೋಗ್ತಿದ್ದಾರೆ, ಊಟ ಮಾಡ್ತಿದ್ದಾರೆ. ಯಾವುದೇ ಸ್ಪೋರ್ಟ್ ನಲ್ಲಿ ಭಾಗಿಯಾಗಬಹುದು. ಇಂದು ಅಥವಾ ನಾಳೆ ಡಿಸ್ಚಾರ್ಜ್ ಮಾಡಲಾಗುತ್ತೆ’ ಎಂದು ದಿಗಂತ್‌ಗೆ ಚಿಕಿತ್ಸೆ ನೀಡಿದ ವೈದ್ಯರು ಡಾ. ವಿದ್ಯಾಧರ್ ಹೇಳಿದ್ದರು.
ಗೋವಾದ ಕಡಲ ತೀರದಲ್ಲಿ ಸೊಮರ್ ಸಾಲ್ಟ್ ಜಂಪ್ ಮಾಡಲು ಹೋಗಿ ಸ್ಪೈಲನ್ ಕಾರ್ಡ್‌ಗೆ ಗಾಯ ಮಾಡಿಕೊಂಡಿದ್ರು. ಬಳಿಕ ಏರ್‌ಲಿಫ್ಟ್ ಮಾಡಿ ದಿಗಂತ್‌ರನ್ನ ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು. ಆರೋಗ್ಯದಲ್ಲಿ ಸ್ಥಿರವಿರುವ ಕಾರಣ ನಟ ದಿಗಂತ್ ಅವರನ್ನು ಮನೆಯಲ್ಲಿಯೇ ಮೂರು ತಿಂಗಳು ಬೆಡ್ ರೆಸ್ಟ್ ಮಾಡಲು ಡಾ.ವಿಧ್ಯಾಧರ್ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
